ಭಟ್ಕಳ: ರಾಜ್ಯ ಸಚಿವ ಸಂಪುಟ (cabinet) ವಿಸ್ತರಣೆಯಲ್ಲಿ ಭಟ್ಕಳ ಶಾಸಕ (Bhatkal MLA) ಮಂಕಾಳ ವೈದ್ಯ (Mankal Vaidya) ಅವರಿಗೆ ಸಚಿವ ಸ್ಥಾನ (Ministerial Post) ಕೈತಪ್ಪಿರುವುದು ರಾಜಕೀಯ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ. ಈ ಬೆಳವಣಿಗೆಯ ನಂತರ ಭಟ್ಕಳ ಬ್ಲಾಕ್ ಕಾಂಗ್ರೆಸ್ (BCC) ನಾಯಕರ ಮೌನವೂ ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ಇದುವರೆಗೆ ಶಾಸಕ ಮಂಕಾಳ ವೈದ್ಯ (Mankal Vaidya) ವಿರುದ್ಧ ಯಾವುದೇ ಆರೋಪ ಅಥವಾ ಟೀಕೆ ಕೇಳಿಬಂದಾಗ ತಕ್ಷಣ ಸುದ್ದಿಗೋಷ್ಠಿ ಮೂಲಕ ಪ್ರತಿಕ್ರಿಯಿಸಿ ಅವರ ಪರವಾಗಿ ನಿಲ್ಲುತ್ತಿದ್ದ ಭಟ್ಕಳ ಬ್ಲಾಕ್ ಕಾಂಗ್ರೆಸ್ (BCC) ಅಧ್ಯಕ್ಷರು ಹಾಗೂ ಪದಾಧಿಕಾರಿಗಳು, ಸಚಿವ ಸ್ಥಾನ ಕೈತಪ್ಪಿದ ಬಳಿಕ ಮಾತ್ರ ಯಾವುದೇ ಅಧಿಕೃತ ಹೇಳಿಕೆ ನೀಡದೇ ಮೌನ ವಹಿಸಿರುವುದು ರಾಜಕೀಯವಾಗಿ ಗಮನ ಸೆಳೆಯುತ್ತಿದೆ.

Case registered/ ಶಿರಾಲಿಯಲ್ಲಿ ವ್ಯಕ್ತಿ ಬೆಂಕಿಗೆ ಆಹುತಿ

ಸಚಿವ ಸ್ಥಾನ ಸಿಗದ ಹಿನ್ನೆಲೆಯಲ್ಲಿ ಶಾಸಕ ಮಂಕಾಳ ವೈದ್ಯ ಅಸಮಾಧಾನಗೊಂಡಿದ್ದಾರೆ ಎಂಬ ಮಾತುಗಳು ಕಾಂಗ್ರೆಸ್ ವಲಯದಲ್ಲೇ (Congress circle) ಕೇಳಿಬರುತ್ತಿವೆ. ಆದರೆ ಅವರು ಇದುವರೆಗೆ ಹೈಕಮಾಂಡ್ (Highcommand) ವಿರುದ್ಧ ಬಹಿರಂಗವಾಗಿ ಯಾವುದೇ ಅಸಮಾಧಾನ ವ್ಯಕ್ತಪಡಿಸಿಲ್ಲ. ಪಕ್ಷದ ಶಿಸ್ತು ಕಾಪಾಡುವ ನಿಟ್ಟಿನಲ್ಲಿ ಅವರು ಎಚ್ಚರಿಕೆಯ ನಡೆ ಅನುಸರಿಸುತ್ತಿದ್ದಾರೆ ಎನ್ನಲಾಗುತ್ತಿದೆ.

Mankal Vaidya/ ಮಂಕಾಳ ವೈದ್ಯಗೆ ತಪ್ಪಿದ ಸಚಿವ ಸ್ಥಾನ: ಮೊದಲ ಬಾರಿಗೆ ಭಟ್ಕಳದಲ್ಲಿ ಬಹಿರಂಗ ಅಸಮಾಧಾನ

ಆದರೆ ಇತ್ತೀಚಿನ ಕೆಲವು ಬೆಳವಣಿಗೆಗಳು ಅವರ ಅಸಮಾಧಾನಕ್ಕೆ ಪರೋಕ್ಷ ಸೂಚನೆ ನೀಡುವಂತಿವೆ. ಉತ್ತರ ಕನ್ನಡ (Uttara Kannada) ಜಿಲ್ಲೆಯ ಮಳೆ ವಿಪತ್ತು ನಿರ್ವಹಣೆಯ ಉಸ್ತುವಾರಿ ಸಚಿವರಾದ ಲಕ್ಷ್ಮಣ ಸವದಿ (Laxman Savadi) ಜಿಲ್ಲೆಗೆ ಭೇಟಿ ನೀಡಿದ ವೇಳೆ ಮಂಕಾಳ ವೈದ್ಯ (Mankal Vaidya) ಅವರು ಅವರನ್ನು ಭೇಟಿ ಮಾಡಲಿಲ್ಲ. ಕಾರವಾರದಲ್ಲಿ (Karwar) ನಡೆದ ಜಿಲ್ಲಾ ಮಟ್ಟದ ಸಭೆಯಿಂದಲೂ ಅವರು ದೂರ ಉಳಿದಿದ್ದರು. ಬಳಿಕ ಹೊನ್ನಾವರದಲ್ಲಿ (Honnavar) ನಡೆದ ಸಭೆಯಲ್ಲಿಯೂ ಅವರ ಗೈರುಹಾಜರಿ ರಾಜಕೀಯ ವಲಯದಲ್ಲಿ (political circle) ಹಲವು ರೀತಿಯ ವಿಶ್ಲೇಷಣೆಗೆ ಕಾರಣವಾಗಿದೆ.

Mankal Vaidya/ ಸಚಿವ ಲಕ್ಷ್ಮಣ ಸವದಿ ಸಭೆಗೆ ಮಂಕಾಳ ವೈದ್ಯ ಗೈರು: ಕಾರಣವೇನು?

ಒಂದೆಡೆ ಸಚಿವ ಸ್ಥಾನ ತಪ್ಪಿದ ನೋವು, ಮತ್ತೊಂದೆಡೆ ಪಕ್ಷದ ವಿರುದ್ಧ ಬಹಿರಂಗವಾಗಿ ಆಕ್ರೋಶ ವ್ಯಕ್ತಪಡಿಸಲು ಸಾಧ್ಯವಾಗದ ಪರಿಸ್ಥಿತಿ ಸಿಎಂ ಡಿ ಕೆ ಶಿವಕುಮಾರ (D K Shivakumar) ಅವರ ಆಪ್ತ ಬಳಗದಲ್ಲಿ ಗುರುತಿಸಿಕೊಂಡಿರುವ ಮಂಕಾಳ ವೈದ್ಯ ಅವರನ್ನು ಇಕ್ಕಟ್ಟಿನ ಸ್ಥಿತಿಗೆ ತಳ್ಳಿದೆ ಎಂಬ ಅಭಿಪ್ರಾಯಗಳು ಕೇಳಿಬರುತ್ತಿವೆ. ಪಕ್ಷದೊಳಗಿನ ಶಿಸ್ತು ಮತ್ತು ವೈಯಕ್ತಿಕ ಅಸಮಾಧಾನದ ನಡುವೆ ಅವರು ಸಮತೋಲನ ಸಾಧಿಸಲು ಪ್ರಯತ್ನಿಸುತ್ತಿದ್ದಾರೆ ಎನ್ನಲಾಗುತ್ತಿದೆ.

Mari jatra/ ಭಟ್ಕಳ ಮಾರಿ ಹಬ್ಬ ಸಂಪನ್ನ 

ಈ ಎಲ್ಲ ಬೆಳವಣಿಗೆಗಳ ನಡುವೆಯೂ ಭಟ್ಕಳ ಬ್ಲಾಕ್ ಕಾಂಗ್ರೆಸ್‌ನ ಮೌನ ಮಾತ್ರ ಇನ್ನಷ್ಟು ಕುತೂಹಲಕ್ಕೆ ಕಾರಣವಾಗಿದೆ. ಸಾಮಾನ್ಯವಾಗಿ ಶಾಸಕರ ಪರವಾಗಿ ಧ್ವನಿ ಎತ್ತುತ್ತಿದ್ದ ನಾಯಕರು ಈಗ ಯಾವುದೇ ಪ್ರತಿಕ್ರಿಯೆ ನೀಡದಿರುವುದು ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.

Minister Laxman Savadi/ ಸಚಿವ ಲಕ್ಷ್ಮಣ ಸವದಿ ಜಿಲ್ಲಾ ಪ್ರವಾಸ: ಭಟ್ಕಳಕ್ಕಿಲ್ಲ ಭೇಟಿ, ಜನ ಬೇಸರ 

ಸದ್ಯ ಮಂಕಾಳ ವೈದ್ಯ ಅವರು ಸಾರ್ವಜನಿಕವಾಗಿ ಯಾವುದೇ ಹೇಳಿಕೆ ನೀಡಿಲ್ಲ. ಬ್ಲಾಕ್ ಕಾಂಗ್ರೆಸ್ ಕೂಡ ಅಧಿಕೃತ ಪ್ರತಿಕ್ರಿಯೆ ಪ್ರಕಟಿಸಿಲ್ಲ. ಮುಂದಿನ ದಿನಗಳಲ್ಲಿ ಈ ವಿಚಾರದಲ್ಲಿ ಪಕ್ಷದ ಸ್ಥಳೀಯ ನಾಯಕತ್ವ ಯಾವ ನಿಲುವು ತಾಳಲಿದೆ ಎಂಬುದು ಕುತೂಹಲದ ವಿಷಯವಾಗಿದೆ.

Opportunity/ ಗ್ರಾಮ ಒನ್ ಕೇಂದ್ರ ಆರಂಭಿಸಲು ಅವಕಾಶ