ಭಟ್ಕಳ ಡೈರಿ ವರದಿ

ಭಟ್ಕಳ: ನಗರದಲ್ಲಿ ಸಾರ್ವಜನಿಕರು ಎಲ್ಲೆಂದರಲ್ಲಿ ತ್ಯಾಜ್ಯ (Waste) ಎಸೆಯುತ್ತಿರುವುದು ಒಂದೆಡೆಯಾದರೆ (public negligence), ಅದನ್ನು ತೆರವುಗೊಳಿಸಿ ಸ್ವಚ್ಛತೆ ಕಾಪಾಡಬೇಕಾದ ನಗರಸಭೆಯ (City Council) ನಿರ್ಲಕ್ಷ್ಯ ಮತ್ತೊಂದೆಡೆ. ಇದು ಪ್ರಜ್ಞಾವಂತ ನಾಗರಿಕರ ಆಕ್ರೋಶಕ್ಕೆ ಕಾರಣವಾಗಿದೆ.

ರಾಷ್ಟ್ರೀಯ ಹೆದ್ದಾರಿಗೆ (national highway) ಹೊಂದಿಕೊಂಡಿರುವ ಮಣ್ಕುಳಿಯ ಪೆಟ್ರೋಲ್ ಬಂಕ್ ಪಕ್ಕದ ರಸ್ತೆಯಲ್ಲಿ, ಗುಳ್ಮೀ ರಸ್ತೆಗೆ ಸಂಪರ್ಕ ಕಲ್ಪಿಸುವ ಸಿಮೆಂಟ್ ರಸ್ತೆಯ ಬದಿಯಲ್ಲಿ ಪ್ರತಿನಿತ್ಯ ಮಾಂಸ ಸೇರಿದಂತೆ ವಿವಿಧ ರೀತಿಯ ತ್ಯಾಜ್ಯವನ್ನು (Waste) ಸಾರ್ವಜನಿಕರು ತಂದು ಎಸೆಯುತ್ತಿದ್ದಾರೆ. ಪರಿಣಾಮವಾಗಿ ಪ್ರದೇಶದಲ್ಲಿ ತ್ಯಾಜ್ಯದ ರಾಶಿ ನಿರ್ಮಾಣವಾಗಿದ್ದು, ದುರ್ವಾಸನೆ ಹಾಗೂ ಅನೈರ್ಮಲ್ಯದ ವಾತಾವರಣ ನಿರ್ಮಾಣವಾಗಿದೆ. ನಾಯಿ, ಜಾನುವಾರು ಅವುಗಳನ್ನು ಎಳೆದೊಯ್ದು, ಸುತ್ತಮುತ್ತಲಿನ ನಿವಾಸಿಗಳಿಗೆ ತೊಂದರೆಯಾಗುತ್ತಿದೆ.

Murudeshwar/ ಗೃಹಪ್ರವೇಶಕ್ಕೆ ಹೋದಾಗ ಸ್ಕೂಟಿ ಕಳವು

ತ್ಯಾಜ್ಯ ಎಸೆಯುವವರ ವಿರುದ್ಧ ಕ್ರಮ ಕೈಗೊಳ್ಳಬೇಕು ಹಾಗೂ ನಿಯಮಿತವಾಗಿ ಸ್ಥಳವನ್ನು ಸ್ವಚ್ಛಗೊಳಿಸಬೇಕು ಎಂದು ಸ್ಥಳೀಯರು ಹಲವು ಬಾರಿ ನಗರಸಭೆ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ ಎಂಬ ಆರೋಪ ಕೇಳಿಬಂದಿದೆ. ಈ ಬಗ್ಗೆ ಜಿಲ್ಲಾಧಿಕಾರಿಯವರ ವಾಟ್ಸಾಪ್ ಸಂಖ್ಯೆಗೂ ದೂರು ಸಲ್ಲಿಸಲಾಗಿದೆ. ಪರಿಣಾಮ ಶೂನ್ಯ.

Social work/ ವಾಲಿಬಾಲ್ ಪಂದ್ಯಾಟ ನಡೆಸಿ ಪ್ರೊಜೆಕ್ಟರ್ ತಂದ ಯುವಕರು

ನಗರಸಭೆಯ ನಿರ್ಲಕ್ಷ್ಯದಿಂದ ಬೇಸತ್ತ ಸ್ಥಳೀಯ ಯುವಕನೊಬ್ಬ ತ್ಯಾಜ್ಯ ಎಸೆಯದಂತೆ ಸಾರ್ವಜನಿಕರಿಗೆ ಎಚ್ಚರಿಕೆ ನೀಡುವ ಬ್ಯಾನರ್‌ವನ್ನೇ ಸ್ಥಳದಲ್ಲಿ ಅಳವಡಿಸಿದ್ದಾನೆ. ಆದರೂ ಕೆಲವರು ತ್ಯಾಜ್ಯ ಎಸೆಯುವುದನ್ನು ಮುಂದುವರಿಸಿರುವುದು ಸ್ಥಳೀಯರ ಅಸಮಾಧಾನಕ್ಕೆ ಕಾರಣವಾಗಿದೆ.

Karate Championship/ ಉಡುಪಿಯಲ್ಲಿ ಕರಾಟೆ ಚಾಂಪಿಯನ್ಶಿಪ್: ಭಟ್ಕಳದ ನಾಗಶ್ರೀ ವಿದ್ಯಾರ್ಥಿಗಳ ಸಾಧನೆ 

ಸಾರ್ವಜನಿಕರ ನಿರ್ಲಕ್ಷ್ಯದಿಂದ ಸಮಸ್ಯೆ ಉಂಟಾಗುತ್ತಿದ್ದರೂ, ನಗರಸಭೆಯೂ ತನ್ನ ಜವಾಬ್ದಾರಿಯಿಂದ ನುಣುಚಿಕೊಳ್ಳಬಾರದು ಎಂದು ಪ್ರಜ್ಞಾವಂತ ನಾಗರಿಕರು ಆಗ್ರಹಿಸಿದ್ದಾರೆ. ತ್ಯಾಜ್ಯ ಎಸೆಯುವವರನ್ನು ಪತ್ತೆಹಚ್ಚಿ ದಂಡ ವಿಧಿಸಲು ಸ್ಥಳದಲ್ಲಿ ಸಿಸಿ ಕ್ಯಾಮೆರಾ ಅಳವಡಿಸಬೇಕು ಹಾಗೂ ನಿಯಮಿತವಾಗಿ ತ್ಯಾಜ್ಯ ತೆರವುಗೊಳಿಸಬೇಕು ಎಂದು ಒತ್ತಾಯಿಸಿದ್ದಾರೆ.

Passenger shelter/ ತೆರ‍್ನಮಕ್ಕಿಯಲ್ಲಿ ಪ್ರಯಾಣಿಕರ ತಂಗುದಾಣ ಲೋಕಾರ್ಪಣೆ

ನಗರಸಭೆ ಅಧಿಕಾರಿಗಳು ತಕ್ಷಣ ಸ್ಥಳ ಪರಿಶೀಲನೆ ನಡೆಸಿ, ತ್ಯಾಜ್ಯ ತೆರವುಗೊಳಿಸುವುದರ ಜೊತೆಗೆ ಸಾರ್ವಜನಿಕರು ಮತ್ತೆ ತ್ಯಾಜ್ಯ ಎಸೆಯದಂತೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂಬುದು ಸ್ಥಳೀಯರ ಆಗ್ರಹವಾಗಿದೆ. ಸ್ವಚ್ಛ ನಗರ ನಿರ್ಮಾಣಕ್ಕೆ ಸಾರ್ವಜನಿಕರ ಸಹಕಾರ ಎಷ್ಟು ಅಗತ್ಯವೋ, ನಗರಸಭೆಯ ಪರಿಣಾಮಕಾರಿ ಮೇಲ್ವಿಚಾರಣೆಯೂ ಅಷ್ಟೇ ಮುಖ್ಯವಾಗಿದೆ.

Akhand Bharat/ ಅಖಂಡ ಭಾರತದ ಕಲ್ಪನೆ ಮುಂದಿನ ಪೀಳಿಗೆಗೆ ಪರಿಚಯಿಸಬೇಕು: ಜಗದೀಶ ಕಾರಂತ