ಭಟ್ಕಳ ಡೈರಿ ವರದಿ
ಭಟ್ಕಳ: ನಗರದ ರೈಲ್ವೆ ನಿಲ್ದಾಣಕ್ಕೆ (railway station) ತೆರಳುವ ರಸ್ತೆಯಲ್ಲಿಯೇ ತ್ಯಾಜ್ಯದ ರಾಶಿ (garbage) ಕಂಡುಬರುತ್ತಿದ್ದು, ಸಾರ್ವಜನಿಕರು ಹಾಗೂ ಸ್ಥಳೀಯರಲ್ಲಿ ಆತಂಕ ಮೂಡಿಸಿದೆ.
Fishermen/ ಉತ್ತರ ಕನ್ನಡ ಜಿಲ್ಲೆಯ ಮೀನುಗಾರರ ಜೀವಕ್ಕಿಲ್ಲವೇ ಬೆಲೆ?
ಗುಳಮಿಯಿಂದ ಭಟ್ಕಳ (Bhatkal) ರೈಲ್ವೆ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ಈ ರಸ್ತೆ ರೈಲ್ವೆ ಮಾರ್ಗಕ್ಕೆ ಸಮಾನಾಂತರವಾಗಿ ಸಾಗುತ್ತದೆ. ತಲಾಂದ, ಗುಳಮಿ, ಮುಟ್ಟಳ್ಳಿ ಸೇರಿದಂತೆ ಸುತ್ತಮುತ್ತಲಿನ ಗ್ರಾಮಸ್ಥರು ಹಾಗೂ ರೈಲು ಪ್ರಯಾಣಿಕರು ಈ ರಸ್ತೆಯನ್ನು ಪ್ರತಿನಿತ್ಯ ಬಳಸುತ್ತಾರೆ. ಅಲ್ಲದೆ, ಶಾಲಾ ಮಕ್ಕಳು ಕೂಡ ಇದೇ ರಸ್ತೆಯಲ್ಲಿ ಸಂಚರಿಸುತ್ತಾರೆ.
pothole/ ಮಣ್ಕುಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಬಾಯ್ದೆರೆದ ಹೊಂಡ
ರಸ್ತೆಯ ಸನಿಹದಲ್ಲೇ ಗೋಳಿಮಕ್ಕಿ ದೇವಸ್ಥಾನ ಹಾಗೂ ಹಲವಾರು ಮನೆಗಳಿದ್ದು, ತ್ಯಾಜ್ಯದ ರಾಶಿಯಿಂದ ದುರ್ವಾಸನೆ ಹಾಗೂ ಅನೈರ್ಮಲ್ಯ ಉಂಟಾಗಿದೆ. ತ್ಯಾಜ್ಯದಲ್ಲಿ ಆಹಾರ ಪದಾರ್ಥಗಳ ಅವಶೇಷಗಳು ಇರುವುದರಿಂದ ನಾಯಿಗಳು ಹಾಗೂ ಹಂದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಸೇರಿಕೊಳ್ಳುತ್ತಿವೆ. ಇದರಿಂದ ರಸ್ತೆಯಲ್ಲಿ ಸಂಚರಿಸುವವರಿಗೆ ತೊಂದರೆಯಾಗುತ್ತಿದ್ದು, ಬೈಕ್ ಸವಾರರ ಮೇಲೂ ನಾಯಿಗಳು ದಾಳಿ ನಡೆಸಿರುವ ಘಟನೆಗಳು ನಡೆದಿವೆ. ಮೊನ್ನೆಯಷ್ಟೇ ಓರ್ವ ಬಾಲಕನ ಮೇಲೂ ನಾಯಿ ದಾಳಿ ನಡೆಸಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.
Anxiety/ ಕರಾವಳಿಯಲ್ಲಿ ಮೀನುಗಾರರ ಸಾವು ಏರಿಕೆ: ಉತ್ತರ ಕನ್ನಡ ಜಿಲ್ಲೆಗಿಲ್ಲ ಲೈಫ್ ಜಾಕೆಟ್
ಬೆಳಲಖಂಡದಲ್ಲಿ ಸಿಸಿ ಕ್ಯಾಮೆರಾ (CC camera) ಅಳವಡಿಸಿರುವುದರಿಂದ ಅಲ್ಲಿಗೆ ಕಸ ಎಸೆಯಲು ಸಾಧ್ಯವಾಗದ ಕೆಲವರು, ಇದೀಗ ರೈಲ್ವೆ ನಿಲ್ದಾಣ ರಸ್ತೆಯ ಬದಿಗೆ ತ್ಯಾಜ್ಯ ತಂದು ಸುರಿಯುತ್ತಿದ್ದಾರೆ ಎಂಬ ಆರೋಪವೂ ಕೇಳಿಬಂದಿದೆ. ಹೀಗಾಗಿ ನಗರಸಭೆಯ (city council) ಅಧಿಕಾರಿಗಳು ಕೂಡಲೇ ಸ್ಥಳಕ್ಕೆ ಭೇಟಿ ನೀಡಿ ತ್ಯಾಜ್ಯವನ್ನು ತೆರವುಗೊಳಿಸಬೇಕು. ಮುಂದಿನ ದಿನಗಳಲ್ಲಿ ಇಲ್ಲಿ ತ್ಯಾಜ್ಯ ಸುರಿಯದಂತೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ. ತ್ಯಾಜ್ಯ ಎಸೆಯುವವರನ್ನು ಪತ್ತೆಹಚ್ಚಲು ಈ ರಸ್ತೆಯಲ್ಲೂ ಸಿಸಿ ಕ್ಯಾಮೆರಾ ಅಳವಡಿಸಬೇಕು ಎಂದು ಅವರು ಮನವಿ ಮಾಡಿದ್ದಾರೆ.
Impact/ ‘ಭಟ್ಕಳ ಡೈರಿ’ ವರದಿ ಫಲಶ್ರುತಿ: ವರದಿ ಬೆನ್ನಲ್ಲೇ ತ್ಯಾಜ್ಯ ತೆರವು
ಶಾಲಾ ಮಕ್ಕಳು, ಗ್ರಾಮಸ್ಥರು ಹಾಗೂ ರೈಲು ಪ್ರಯಾಣಿಕರು ಪ್ರತಿನಿತ್ಯ ಬಳಸುವ ಪ್ರಮುಖ ರಸ್ತೆಯಾಗಿರುವುದರಿಂದ ನಗರಸಭೆ ಈ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ ತಕ್ಷಣ ಕ್ರಮ ಕೈಗೊಳ್ಳಬೇಕೆಂಬುದು ಸಾರ್ವಜನಿಕರ ಒತ್ತಾಯವಾಗಿದೆ.


