ಭಟ್ಕಳ: ರಾಜ್ಯದ ನೂತನ ಸಚಿವ ಸಂಪುಟ ರಚನೆಯಲ್ಲಿ ಉತ್ತರ ಕನ್ನಡ (Uttara Kannada) ಜಿಲ್ಲೆಯ ಮಾಜಿ ಸಚಿವ, ಭಟ್ಕಳ (Bhatkal) ಕ್ಷೇತ್ರದ ಶಾಸಕ ಮಂಕಾಳ ವೈದ್ಯ (Mankal Vaidya) ಅವರಿಗೆ ಸಚಿವ ಸ್ಥಾನ ಸಿಗದೆ ಹೋಗಿರುವುದು ಜಿಲ್ಲೆಯ ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ಡಾ ಯತೀಂದ್ರ ಸಿದ್ದರಾಮಯ್ಯ ಹೊರತುಪಡಿಸಿ, ಹಿರಿಯರಿಗೆ ಮಾತ್ರ ಮೊದಲ ಪಟ್ಟಿಯಲ್ಲಿ ಅವಕಾಶ ನೀಡಿರುವುದು ಮಂಕಾಳ ವೈದ್ಯರಿಗೆ ಸಚಿವ ಸ್ಥಾನ ತಪ್ಪಲು ಕಾರಣ ಎನ್ನಲಾಗಿದೆ. ಆದರೆ, ಉತ್ತರ ಕನ್ನಡ ಜಿಲ್ಲೆಯ ಏಕೈಕ ಹಿರಿಯ ಕಾಂಗ್ರೆಸ್ ಶಾಸಕ ಆರ್ ವಿ ದೇಶಪಾಂಡೆ (R V Deshpande) ಅವರನ್ನೂ ಕೈಬಿಟ್ಟಿರುವದು ಜಿಲ್ಲೆಯ ಕಾಂಗ್ರೆಸ್ (Congress) ಕಾರ್ಯಕರ್ತರಲ್ಲಿ ಅಸಮಾಧಾನ ವ್ಯಕ್ತವಾಗಿದೆ.

Murinakatte/ ಮುರಿನಕಟ್ಟೆ ಸ್ಥಳದಲ್ಲಿ ರಸ್ತೆ ಕಾಮಗಾರಿ: ಬಿಗು ಬಂದೋಬಸ್ತ್ 

ಮಂಕಾಳ ವೈದ್ಯ ಅವರು ಮೀನುಗಾರಿಕೆ ಸಚಿವರಾಗಿ (fisheries minister) ಕರಾವಳಿಯಲ್ಲಿ (Coastal) ಕಾಂಗ್ರೆಸ್‌ನ ಪ್ರಮುಖ ಮುಖವಾಗಿದ್ದಾರೆ. ಉತ್ತರ ಕನ್ನಡ ಜಿಲ್ಲೆಗೆ ಸಚಿವ ಸಂಪುಟದಲ್ಲಿ ಪ್ರತಿನಿಧಿತ್ವ ಸಿಗಬೇಕು ಎಂಬ ಬೇಡಿಕೆ ವ್ಯಕ್ತವಾಗಿತ್ತು. ಆದರೆ ಸಂಪುಟ ರಚನೆ ವೇಳೆ ಪ್ರಾದೇಶಿಕ ಸಮತೋಲನ, ಜಾತಿ ಸಮೀಕರಣ, ಹಿರಿಯತೆ ಹಾಗೂ ಪಕ್ಷದ ಒಳಗಿನ ರಾಜಕೀಯ ಲೆಕ್ಕಾಚಾರಗಳನ್ನು ಪರಿಗಣಿಸಿ ಅಂತಿಮ ಪಟ್ಟಿಯನ್ನು ಸಿದ್ಧಪಡಿಸಲಾಗಿದೆ. ಕರಾವಳಿಯ ಉಳ್ಳಾಲ ಕ್ಷೇತ್ರದ ಶಾಸಕ ಮಾಜಿ ಸಚಿವ ಯು ಟಿ ಖಾದರ್ (U T Khadar) ಅವರಿಗೆ ಸಚಿವ ಸ್ಥಾನ ಕೊಟ್ಟಿರುವುದು ಮಂಕಾಳ ವೈದ್ಯರಿಗೆ ಕೈ ತಪ್ಪಲು ಪ್ರಮುಖ ಕಾರಣ ಎನ್ನಲಾಗುತ್ತಿದೆ.

Dirty water/ ತೆರೆದ ಚರಂಡಿಯಲ್ಲಿ ಗಲೀಜು ನೀರು: ಮಾರುತಿ ನಗರದಲ್ಲಿ ಅವ್ಯವಸ್ಥೆ

ಸಚಿವ ಸ್ಥಾನ ತಪ್ಪಿರುವುದರಿಂದ ಮಂಕಾಳ ವೈದ್ಯ ಬೆಂಬಲಿಗರಲ್ಲಿ ನಿರಾಸೆ ಕಂಡುಬಂದಿದೆ. ಆದಾಗ್ಯೂ, ಮುಂದಿನ ದಿನಗಳಲ್ಲಿ ನಡೆಯಬಹುದಾದ ಸಚಿವ ಸಂಪುಟ ವಿಸ್ತರಣೆ ವೇಳೆ ಅವರಿಗೆ ಅವಕಾಶ ಸಿಗುವ ಸಾಧ್ಯತೆಯನ್ನು ಕಾಂಗ್ರೆಸ್ ವಲಯ ಸಂಪೂರ್ಣವಾಗಿ ತಳ್ಳಿಹಾಕಿಲ್ಲ. ಅಧಿಕೃತವಾಗಿ ಪಕ್ಷದ ನಾಯಕತ್ವ ಈ ಕುರಿತು ಯಾವುದೇ ಸ್ಪಷ್ಟ ಹೇಳಿಕೆ ನೀಡಿಲ್ಲ.

Murinakatte/ ಶೀಘ್ರದಲ್ಲೇ ಮುರಿನಕಟ್ಟೆ ಮರುನಿರ್ಮಾಣ: ಸಂಸದ ಕಾಗೇರಿ

ರಾಜಕೀಯ ವಿಶ್ಲೇಷಕರ ಅಭಿಪ್ರಾಯದಂತೆ, ಸಚಿವ ಸ್ಥಾನ ಹಂಚಿಕೆಯಲ್ಲಿ ಕರಾವಳಿ ಭಾಗಕ್ಕೆ ಸೀಮಿತ ಅವಕಾಶ ದೊರೆತಿರುವುದು ಹಾಗೂ ಡಿ ಕೆ ಶಿವಕುಮಾರ (D K Shivakumar) ಮತ್ತು ಸಿದ್ದರಾಮಯ್ಯ (Siddaramaiah) ಗುಂಪುಗಳ ನಡುವೆ ಸಮತೋಲನ ಕಾಯ್ದುಕೊಳ್ಳುವ ಅಗತ್ಯವೇ ಮಂಕಾಳ ವೈದ್ಯ ಅವರಿಗೆ ಈ ಬಾರಿ ಅವಕಾಶ ತಪ್ಪಲು ಪ್ರಮುಖ ಕಾರಣಗಳಾಗಿವೆ.

Fine/ ಅಪ್ರಾಪ್ತಗೆ ಬೈಕ್ ಕೊಟ್ಟ ಮಹಿಳೆಗೆ ದಂಡ

ಮಂಕಾಳ ವೈದ್ಯ ಅವರಿಗೆ ಸಚಿವ ಸ್ಥಾನ ಸಿಗದಿರುವುದು ಉತ್ತರ ಕನ್ನಡ ಕಾಂಗ್ರೆಸ್ ಕಾರ್ಯಕರ್ತರಿಗೆ ನಿರಾಸೆ ತಂದಿದ್ದರೂ, ಭವಿಷ್ಯದ ಸಂಪುಟ ವಿಸ್ತರಣೆಯಲ್ಲಿ ಅವರ ಹೆಸರು ಮತ್ತೆ ಪರಿಗಣನೆಗೆ ಬರುವ ಸಾಧ್ಯತೆ ಇದೆ.

Murinakatte/ ಮುರಿನಕಟ್ಟೆ ನಿರ್ಮಾಣಕ್ಕೆ ಪರ್ಯಾಯ ಸ್ಥಳ