ಭಟ್ಕಳ: ಚುನಾವಣೆ ವೇಳೆ ಒಂದು ಕೋಮಿಗೆ ನೀಡಿದ ಮಾತಿನಂತೆ ಸಚಿವ ಮಂಕಾಳ್ ವೈದ್ಯ ಅವರ ಋಣ ತೀರಿಸುವ ಉದ್ದೇಶದಿದ್ದ ಹೆಬಳೆ ಪಂಚಾಯಿತಿ ಮತ್ತು ಜಾಲಿ ಪಟ್ಟಣ ಪಂಚಾಯಿತಿಯನ್ನು ಸೇರಿಸಿಕೊಂಡು ನಗರಸಭೆಯನ್ನಾಗಿಸಿ ಹಿಂದುಗಳಿಗೆ ಅನ್ಯಾಯ ಮಾಡಿದ್ದಾರೆ ಎಂದು ಮಾಜಿ ಶಾಸಕ ಸುನೀಲ ನಾಯ್ಕ ಹೇಳಿದರು. (Bhatkal BJP pressmeet)
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
ಅವರು ಶನಿವಾರದಂದು ಮಣ್ಕುಳಿಯಲ್ಲಿರುವ ಬಿಜೆಪಿ ಕಚೇರಿಯಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ (Bhatkal BJP pressmeet) ಮಾತನಾಡಿದರು. ಭಟ್ಕಳ ಪುರಸಭೆಯನ್ನು ನಗರಸಭೆಯನ್ನಾಗಿ ಮೇಲ್ದರ್ಜೆಗೇರಿಸಿರುವುದಕ್ಕೆ ನಮ್ಮ ವಿರೋಧ ಇಲ್ಲ. ಆದರೆ ಸಾಮಾಜಿಕ ನ್ಯಾಯ ಒದಗಿಸುವ ಕೆಲಸವನ್ನು ಸಚಿವರು ಮಾಡಬೇಕಿತ್ತು . 2022 23ನೇ ಸಾಲಿನಲ್ಲಿ ಮಾನ್ಯ ಮಾಜಿ ಸಚಿವರು ಅನಂತ್ ಕುಮಾರ್ ಹೆಗಡೆ ರವರ ನೇತೃತ್ವದಲ್ಲಿ ನಾನು ಮಂಕಿ ಪಟ್ಟಣ ಪಂಚಾಯತಿ ಮಾಡಿದಾಗ ಭಟ್ಕಳವನ್ನು ಕೂಡ ನಗರಸಭೆಯಾಗಿ ಮೇಲ್ದರ್ಜೆಗೇರಿಸುವ ಆಲೋಚನೆ ಮಾಡಿದ್ದೆವು. ಭಟ್ಕಳ ನಗರಸಭೆಗೆ ಮುಂಡಳ್ಳಿ, ಮುಟ್ಟಳ್ಳಿ, ಶಿರಾಲಿ, ಮಾವಿನಕುರ್ವಾ, ಯಲ್ವಡಿಕವೂರು ಒಟ್ಟು ೫ ಪಂಚಾಯಿತ ಸೇರಿಸಿ ನಗರಸಭೆಯನ್ನಾಗಿಸುವ ಉದ್ದೇಶ ನಮಗಿತ್ತು ಎಂದು ಹೇಳಿದರು.
ಇದನ್ನೂ ಓದಿ: Bhatkal Rural Police/ ಅಡಿಕೆ ಕಳ್ಳತನ ಆರೋಪಿಗಳ ಬಂಧನ
ಈಗ ಪುರಸಭೆಯನ್ನು ಹೆಬಳೆ ಮತ್ತು ಜಾಲಿ ಪಟ್ಟಣ ಪಂಚಾಯಿತಿ ಸೇರಿಸಿ ನಗರಸಭೆಯನ್ನಾಗಿ ಮಾಡುತ್ತಿರುವುದು ಸಚಿವ ಮಂಕಾಳ ವೈದ್ಯರವರು ಒಂದು ಕೋಮಿನ ಋಣ ತೀರಿಸಲು ಮಾಡಿರುವ ಕಾರ್ಯವಾಗಿದೆ ಎಂದು ಹೇಳಿರುವ ಸುನೀಲ ನಾಯ್ಕ, ನಿಮಗೆ ಹಿಂದುಗಳು ಕೂಡ ಮತ ನೀಡಿದ್ದಾರೆ .ನೀವು ಅವರ ಋಣ ಕೂಡ ತೀರಿಸಬೇಕು ಕುಲಂಕುಶವಾಗಿ ತಿಳಿದು ಸರಿಯಾಗಿ ಮಾಡಬೇಕಾಗಿತ್ತು, ಆದರೆ ನೀವು ಚುನಾವಣೆ ಸಂದರ್ಭದಲ್ಲಿ ಒಂದು ಕೋಮಿನವರು ತಿಳಿಸಿದ ವಿಷಯದ ಬಗ್ಗೆ ಅವರ ಕೆಲಸ ಮಾಡಿಕೊಟ್ಟು, ಕೇವಲ ಒಂದು ಕೋಮಿನ ಋಣ ತೀರಿಸಿದ್ದೀರಿ ಎಂದು ಸಚಿವರನ್ನು ತರಾಟೆಗೆ ತೆಗೆದುಕೊಂಡರು.
ಇದನ್ನೂ ಓದಿ: bikes on fire/ ಒಂದೇ ಮನೆಯ 3 ಬೈಕ್ ತಿಂಗಳೊಳಗೆ ಭಸ್ಮ, ಮನೆಗೂ ಹಾನಿ
ಬಿಜೆಪಿ ಮಂಡಲ ಅಧ್ಯಕ್ಷ ಲಕ್ಷ್ಮೀನಾರಾಯಣ ಮಾತನಾಡಿ, ಕೇವಲ ಅಲ್ಪಸಂಖ್ಯಾತ ಸಮುದಾಯವನ್ನು ಓಲೈಸುವ ಉದ್ದೇಶದಿಂದ ಮುಸ್ಲಿಂ ಬಾಹುಳ್ಯವುಳ್ಳ ಹೆಬಳೆ ಪಂಚಾಯಿತಿ ಮತ್ತು ಜಾಲಿ ಪಟ್ಟಣ ಪಂಚಾಯಿತಿಯನ್ನು ಸೇರಿಸಿಕೊಂಡು ನಗರಸಭೆಯನ್ನಾಗಿಸಿ ಹಿಂದುಗಳಿಗೆ ಮಾಡುತ್ತಿರುವ ಅನ್ಯಾಯವಾಗಿದೆ. ಒಂದು ಸಮುದಾಯವನ್ನು ಓಲೈಸಲು ಈ ಮೇಲ್ದರ್ಜೆ ಕಾರ್ಯ ಮಾಡಿದಂತೆ ಕಾಣಿಸುತ್ತಿದೆ ಎಂದು ಹೇಳಿದರು.
ಇದನ್ನೂ ಓದಿ: Municipal Council/ ಭಟ್ಕಳ ನಗರಸಭೆಯಾಗಿ ಮೇಲ್ದರ್ಜೆಗೆ
ರಾಜ್ಯ ಹಿಂದುಳಿದ ಮೋರ್ಚಾ ಉಪಾಧ್ಯಕ್ಷ ಈಶ್ವರ ನಾಯ್ಕ ಮಾತನಾಡಿ, ಭಟ್ಕಳ ಪುರಸಭೆ ವ್ಯಾಪ್ತಿ ಮುಸ್ಲಿಂ ಬಾಹುಳ್ಯ ಇರುವ ಪ್ರದೇಶವಾಗಿದೆ. ಇಲ್ಲಿ ಪ್ರತಿಸಲ ಯಾವುದಾದರೂ ಒಂದು ರೀತಿಯಲ್ಲಿ ಮುಸ್ಲಿಮರೆ ಅಧ್ಯಕ್ಷರಾಗುವಂತಹ ಸಂದರ್ಭ ತರಲಾಗುತ್ತಿದೆ. ನಗರಸಭೆಯನ್ನಾಗಿ ಮೇಲ್ದರ್ಜೆಗೇರಿಸುವುದು ಅಭಿವೃದ್ಧಿ ದೃಷ್ಟಿಯಿಂದ ಮಾಡಬೇಕಾದ ಕಾರ್ಯವಾಗಿದೆ. ಇದು ಯಾವುದೋ ವೋಟ್ ಬ್ಯಾಂಕನ್ನು ಖಾತ್ರಿಪಡಿಸಲು ಮಾಡಿಕೊಳ್ಳುವುದಲ್ಲ. ಭಟ್ಕಳ ನಗರಕ್ಕೆ ಹತ್ತಿರ ಇರುವ ಮುಟ್ಟಳ್ಳಿ ಮುಂಡಳ್ಳಿ, ಶಿರಾಲಿ ಮಾವಿನಕುರುವಾ ಯಲ್ವಡಿಕಾವೂರೂ ಗ್ರಾಮ ಪಂಚಾಯಿತಿಗಳನ್ನು ಸೇರಿಸಿಕೊಂಡು ಮಾಡಿದರೆ ಅಲ್ಲಿಯ ಪ್ರದೇಶದ ಅಭಿವೃದ್ಧಿ ಆಗುತ್ತದೆ ಮತ್ತು ಎಲ್ಲ ಸಮುದಾಯದ ಜನರಿಗೆ ಭಟ್ಕಳ ನಗರಸಭೆಯಲ್ಲಿ ಅವಕಾಶ ಸಿಕ್ಕಂತಾಗುತ್ತದೆ ಎಂದು ಹೇಳಿದರು.
ಇದನ್ನೂ ಓದಿ: Life jacket/ 9 ಮೀನುಗಾರರ ಜೀವ ಉಳಿಸಿದ ಲೈಫ್ ಜಾಕೆಟ್
ನಿಗಮ ಮಂಡಳಿ ಮಾಜಿ ಅಧ್ಯಕ್ಷ ಗೋವಿಂದ ನಾಯ್ಕ ಮಾತನಾಡಿ, ಕಾಂಗ್ರೆಸ್ ಹಾಗೂ ಸಚಿವರು ಅಲ್ಪಸಂಖ್ಯಾತರ ಓಲೈಕೆ ಮುಂದುವರೆದಿದ್ದಾರೆ.
ಮಂಕಾಳ ವೈದ್ಯರು ಹಿಂದೂಗಳ ೭೫ ಸಾವಿರ ಓಟು ಪಡೆದು ಶಾಸಕರಾಗಿದ್ದಾರೆ. ಮುಸ್ಲಿಂ ಸಮುದಾಯ ಓಲೈಕೆ ಮುಂದುವರಿದರೆ ಈ ಜನ್ಮದಲ್ಲಿ ಮುಂದೆ ಅವರು ಗೆಲ್ಲುವುದಿಲ್ಲ. ಭಟ್ಕಳ ೭ ಕಿ ಮೀ ವ್ಯಾಪ್ತಿಯಲ್ಲಿ ನಗರಸಭೆ ಮಾಡಬಹುದು. ಆದರೆ ಇವರು ಹತ್ತಿರ ಇರುವ ಗ್ರಾಮ ಪಂಚಾಯತ್ ಬಿಟ್ಟು ಮುಸ್ಲಿಂ ಸಮುದಾಯದ ಒಲೈಕೆ ಮಾಡುವ ಸಲುವಾಗಿ ಮುಸ್ಲಿಂ ಸಮುದಾಯದ ಜನರು ಹೆಚ್ಚು ಇರುವ ವಾರ್ಡ್ ಸೇರಿಸಿ ನಗರಸಭೆ ಮಾಡಿರುವುದು ಸರಿಯಲ್ಲ. ಭಟ್ಕಳದ ತಂಜೀಂನಲ್ಲಿ ಕಾಂಗ್ರೆಸ್ ಇಲ್ಲ, ಜೆಡಿಎಸ್ ಪಕ್ಷ ಇಲ್ಲ. ಅವರು ತಾವು ನಿರ್ಧರಿಸಿದ ಅಭ್ಯರ್ಥಿಯನ್ನು ಆಯ್ಕೆ ಮಾಡುವ ಸಂಪ್ರದಾಯವಿದೆ. ಅವರು ನಗರಸಭೆ ತಮ್ಮ ಹಿಡಿತಕ್ಕೆ ತೆಗೆದುಕೊಳ್ಳುವ ಸಲುವಾಗಿ ಸಚಿವರ ಮೂಲಕ ಈ ಕೆಲಸ ಮಾಡಿದ್ದಾರೆ ಎಂದು ಆರೋಪಿಸಿದರು.
ಇದನ್ನೂ ಓದಿ: Gangolli seashore/ ಗಂಗೊಳ್ಳಿಯಲ್ಲಿ ಇನ್ನೊಂದು ಮೃತದೇಹ ಪತ್ತೆ
ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಶ್ರೀಕಾಂತ ನಾಯ್ಕ ಮಾತನಾಡಿ, ಭಟ್ಕಳ ಪುರಸಭೆ, ಜಾಲಿ ಪಟ್ಟಣ ಪಂಚಾಯತಿ ಹಾಗೂ ಹೆಬಳೆ ಗ್ರಾಮ ಪಂಚಾಯತಿ ಸೇರಿಸಿ ನಗರಸಭೆ ಮಾಡಿರುವುದು ತರಾತುರಿಯಲ್ಲಿ ಮಾಡಲಾದ ಕೆಲಸ. ಇದಕ್ಕೆ ಸಂಬಂಧಪಟ್ಟಂತೆ ವೈಜ್ಞಾನಿಕ ಅಧ್ಯಯನ ನಡೆದಿಲ್ಲ. ಎಲ್ಲಾ ಹಂತದಲ್ಲಿಯೂ ಪರಿಶೀಲನೆ ನಡೆಸಿಲ್ಲ. ಭಟ್ಕಳ ಪುರಸಭೆ ಸಮೀಪದಲ್ಲಿ ಅಂದರೆ ೫೦೦ ಮೀಟರ್ ವ್ಯಾಪ್ತಿಯಲ್ಲಿ ಇರುವ ರೈಲ್ವೆ ನಿಲ್ದಾಣ, ಸರ್ಪನಕಟ್ಟೆ ಹಾಗೂ ಮುಂಡಳ್ಳಿ ಪ್ರದೇಶವನ್ನು ನಗರಸಭೆಗೆ ಸೇರಿಸದೆ, ಮೀನುಗಾರಿಕೆ ಹಿನ್ನೆಲೆಯಿರುವ ಮಾವಿನಕುರ್ವ ಬಂದರ ಪುರಸಭೆಗೆ ಹೊಂದಿಕೊಂಡು ಇದ್ದರೂ ಸರಿಯಾದ ಮಾಡಬೇಕಾದ ಅಧ್ಯಯನ ನಡೆಸಿಲ್ಲ. ತಂಜೀಂನವರರು ಕಾಂಗ್ರೆಸ್ಸಿನ ಬಿ ಫಾರ್ಮ್ಗೆ ಕವಡೆ ಕಾಸಿನ ಕಿಮ್ಮತ್ತು ನೀಡುತ್ತಿಲ್ಲ. ಜಾಲಿ ಪಟ್ಟಣ ಪಂಚಾಯತ್ ನಲ್ಲಿ ಕೂಡ ಇದೇ ಸ್ಥಿತಿ. ಇಲ್ಲಿ ತಂಜೀಮ್ ಸಂಸ್ಥೆಯು ಬೆಟ್ಟು ಮಾಡಿ ತೋರಿಸಿರುವ ಅಭ್ಯರ್ಥಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಈಗ ಕೂಡ ನಗರಸಭೆ ಆದಲ್ಲಿ ಒಂದು ಸಮುದಾಯದ ಅಧಿಕಾರ ನಡೆಯಲಿದೆ. ಇಲ್ಲಿ ಹಿಂದೂಗಳು ನಾವು ಎರಡನೇ ದರ್ಜೆಯ ಜನರಾಗಿ ಬದುಕಬೇಕಾದ ಪರಿಸ್ಥಿತಿ ಉಂಟಾಗಬಹುದು ಎಂದು ಹೇಳಿದರು.
ಇದನ್ನೂ ಓದಿ: Udupi police/ ಉಡುಪಿಯಲ್ಲಿ ಮನೆಗಳ್ಳತನ ಮಾಡಿದ್ದ ಚಿನ್ನಾಭರಣ ಭಟ್ಕಳ, ಶಿರಸಿಯಲ್ಲಿ ಮಾರಾಟ
ನಿಕಟಪೂರ್ವ ಮಂಡಲ ಅಧ್ಯಕ್ಷ, ಕಾನೂನು ಸಲಹೆಗಾರ ರಾಜೇಶ್ ನಾಯ್ಕ ಮಾತನಾಡಿ, ಬಿಜೆಪಿ ಅವಧಿಯಲ್ಲಿ ೨೦೨೩ರಲ್ಲಿ ಭಟ್ಕಳ ನಗರಸಭೆ ಮಾಡಿ
ಶಿರಾಲಿಯಿಂದ ಮಾವಿನಕುರ್ವೆ, ಮುಂಡಳ್ಳಿ, ಮುಟ್ಳಳ್ಳಿ ಯಲ್ವಡಿಕವೂರು ಸೇರಿಸುವ ಬಗ್ಗೆ ಅನಂತಕುಮಾರ ಹೆಗಡೆ ಅವರ ಚಿಂತನೆ ನಡೆಸಿದ್ದರು. ನಗರ ಸಭೆಯಿಂದ ಟ್ಯಾಕ್ಸ ಗಳು ಏರಿಕೆಯಾಗಲಿದೆ ಹೊರತು ಅಭಿವೃದ್ಧಿ ಆಗುವುದಿಲ್ಲ. ಸರಕಾರದಿಂದ ಯಾವುದೇ ದೊಡ್ಡ ಮಟ್ಟದ ಅನುದಾನ ನೀಡುವುದಿಲ್ಲ. ನಗರೋತ್ಥಾನ ಅನುದಾನ ಮಾತ್ರ ಬರಲಿದೆ. ರಿಯಲ್ ಎಸ್ಟೇಟ್ ಅವರಿಗೆ ಇದು ಅನುಕೂಲ ಹೊರತು ಜನಸಾಮಾನ್ಯರಿಗೆ ಅನುಕೂಲ ಇಲ್ಲ. ಜನಸಾಮಾನ್ಯರ ಟ್ಯಾಕ್ಸ್ ಹೆಚ್ಚು ಕಟ್ಟಬೇಕಾಗುತ್ತದೆ ಎಂದರು.
ಇದನ್ನೂ ಓದಿ: Case filed/ ಕೋಳಿಯಂಕ ಆಡುತ್ತಿದ್ದ ಮೂವರ ಬಂಧನ, 11 ಜನರ ವಿರುದ್ಧ ಪ್ರಕರಣ ದಾಖಲು
ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಹಾಗೂ ಹೆಬಳೆ ಗ್ರಾಮ ಪಂಚಾಯತಿ ಸದಸ್ಯ ಸುಬ್ರಾಯ ದೇವಾಡಿಗ, ಭಟ್ಕಳ ಮಂಡಲದ ಪ್ರಧಾನ ಕಾರ್ಯದರ್ಶಿಗಳಾದ ಶ್ರೀನಿವಾಸ ನಾಯ್ಕ ಹಾಗೂ ಶ್ರೀಧರ ನಾಯ್ಕ, ಭಾಸ್ಕರ ದೈಮನೆ, ಉದಯ ದೇವಾಡಿಗ, ಹೆಬಳೆ ಪಂಚಾಯತ ಸದಸ್ಯ ರಾಮ ನಾಯ್ಕ ಮುಂತಾದವರು ಉಪಸ್ಥಿತರಿದ್ದರು.
ಇದನ್ನೂ ಓದಿ: Fisherman’s body found/ ಹೊನ್ನೇಗದ್ದೆಯ ಸಮುದ್ರ ತೀರದಲ್ಲಿ ಮೀನುಗಾರನ ಮೃತದೇಹ ಪತ್ತೆ



