ಭಟ್ಕಳ: ಕಳೆದ ಒಂದು ವರ್ಷದಿಂದ ಖಾಲಿಯಾಗಿದ್ದ ಭಟ್ಕಳ (Bhatkal) ಉಪವಿಭಾಗಾಧಿಕಾರಿ (Deputy Divisional Officer) ಹುದ್ದೆಗೆ ಸರ್ಕಾರ ನೇಮಕ ಮಾಡಿದ್ದು, ಜೆ ಮಹೇಶ (ಕೆಎಎಸ್ ಕಿರಿಯ ಶ್ರೇಣಿ) ಅಧಿಕಾರ ಸ್ವೀಕರಿಸಿದ್ದಾರೆ.
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
ಕಳೆದ ವರ್ಷ ಡಾ ನಯನ ಎನ್ ವರ್ಗಾವಣೆಯಾದ ಬಳಿಕ ಎಸಿ ಹುದ್ದೆ (Deputy Divisional Officer) ಖಾಲಿಯಾಗಿತ್ತು. ಬಳಿಕ ಶಿರಸಿ (Sirsi) ಉಪ ವಿಭಾಗಾಧಿಕಾರಿಯಾಗಿದ್ದ ಕಾವ್ಯರಾಣಿ ಅವರಿಗೆ ಭಟ್ಕಳದ ಪ್ರಭಾರಿ ಜವಾಬ್ದಾರಿ ನೀಡಲಾಗಿತ್ತು. ಅವರ ಇತ್ತೀಚಿನ ವರ್ಗಾವಣೆಯಿಂದ ಹುದ್ದೆ ಮತ್ತೆ ತೆರವಾಗಿತ್ತು. ಈ ನಡುವೆ ಹೊನ್ನಾವರ (Honnavar) ತಹಶೀಲ್ದಾರ ಪ್ರವೀಣ್ ಕರಂಡೆ ಅವರಿಗೆ ಪ್ರಭಾರಿ ಎಸಿ ಚಾರ್ಜ್ ನೀಡಲಾಗಿತ್ತು.
Cricket tournament/ ಹಿಂದು ಕೊಂಕಣಿ ಪ್ರೀಮಿಯರ ಲೀಗ್: ಮೇ ೯-೧೦ರಂದು ಕ್ರಿಕೆಟ್ ಪಂದ್ಯಾವಳಿ
ರಾಜ್ಯ ಸರ್ಕಾರದ (State government) ವರ್ಗಾವಣೆ ಆದೇಶದಂತೆ ಭಟ್ಕಳಕ್ಕೆ ಆಗಮಿಸಿದ ಜೆ ಮಹೇಶ ಅವರು ಕಚೇರಿಯಲ್ಲಿ ಕಡತಗಳಿಗೆ ಸಹಿ ಹಾಕುವ ಮೂಲಕ ಅಧಿಕಾರ ಸ್ವೀಕರಿಸಿದರು. ಅವರು ಈ ಹಿಂದೆ ಉಡುಪಿ (Udupi) ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತರಾಗಿ ಸೇವೆ ಸಲ್ಲಿಸಿದ ಅನುಭವ ಹೊಂದಿದ್ದಾರೆ.



