ಭಟ್ಕಳ: ಹಿಂದು ಕೊಂಕಣಿ ಗೆಳೆಯರ ಬಳಗ ಇವರ ಆಶ್ರಯದಲ್ಲಿ ಸಮಾಜದ ಹಿರಿಯರ ಮಾರ್ಗದರ್ಶನ ಹಾಗೂ ಕಿರಿಯರ ಸಹಕಾರದೊಂದಿಗೆ ಹಿಂದು ಕೊಂಕಣಿ ಭಾಷಿಕರಿಗಾಗಿ ಆಯೋಜಿಸಿರುವ ‘ಹಿಂದು ಕೊಂಕಣಿ ಪ್ರೀಮಿಯರ ಲೀಗ್-೨೦೨೬’ ಕ್ರಿಕೆಟ್ ಪಂದ್ಯಾವಳಿಯು (Cricket tournament) ಮೇ ೯, ೧೦ರಂದು ಇಲ್ಲಿನ ಶ್ರೀ ಗುರು ಸುಧಿಂದ್ರ ಕಾಲೇಜು ಮೈದಾನದಲ್ಲಿ ಜರುಗಲಿದೆ ಎಂದು ಬಳಗದ ರಾಮಚಂದ್ರ ಕಿಣಿ ತಿಳಿಸಿದರು.
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
ಅವರು ಹಿಂದು ಕೊಂಕಣಿ ಪ್ರೀಮಿಯರ್ ಲೀಗ್ ಕ್ರಿಕೆಟ್ ಪಂದ್ಯಾವಳಿಯ (Cricket tournament) ಕುರಿತಾಗಿ ಕರೆಯಲಾದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ‘ಸಮಾನ ಮನಸ್ಕರನ್ನೊಳಗೊಂಡ ೫-೬ ಜನರ ಚಿಂತನೆ ಹಾಗೂ ಮಾತುಕತೆಯಿಂದ ಆರಂಭಗೊಂಡ ಈ ಹಿಂದು ಕೊಂಕಣಿ ಗೆಳೆಯರ ಬಳಗವು ಒಂದು ಕ್ರಿಕೆಟ್ ಪಂದ್ಯದ ಮೂಲಕ ಹಿಂದು ಸಮಾಜದಲ್ಲಿ ಕೊಂಕಣಿ ಭಾಷಿಕರನ್ನೊಳಗೊಂಡ ಹತ್ತು ಚಿಕ್ಕ ಚಿಕ್ಕ ಸಮಾಜವನ್ನು ಕೇಂದ್ರೀಕರಿಸಿ ಒಗ್ಗೂಡಿಸುವ ಉದ್ದೇಶಕ್ಕೆ ಮುನ್ನುಡಿ ಇದಾಗಿದೆ ಎಂದರು.
Foundation Day/ ಕನ್ನಡ ಸಾಹಿತ್ಯ ಪರಿಷತ್ತಿನ ಸಂಸ್ಥಾಪನಾ ದಿನಾಚರಣೆ
ಈಗಾಗಲೇ ಈ ಪಂದ್ಯಾವಳಿಯಲ್ಲಿ ೬ ತಂಡ ಹಾಗೂ ಮಾಲೀಕರು ರಚಿಸಲಾಗಿದ್ದು ಕೊಂಕಣಿ ಭಾಷಿಕರಲ್ಲಿನ ಕ್ರಿಕೆಟ್ ಆಸಕ್ತರನ್ನು ಒಂದು ತಂಡಕ್ಕೆ ತಲಾ ೨೦೦ ಅಂಕವನ್ನು ನೀಡಿ ತಲಾ ಒಂದು ತಂಡದಲ್ಲಿ ೧೬ ಜನ ಆಟಗಾರರನ್ನು ಈಗಾಗಲೇ ಆಯ್ಕೆ ಮಾಡಿಕೊಂಡಿದ್ದಾರೆ. ಆರು ತಂಡಗಳ ಪೈಕಿ ಗೋಲ್ಡನ್ ಸ್ಟಾರ್, ರಂಜನ್ ಚಾಲೆಂಜರ್ಸ್ ಭಟ್ಕಳ, ಓಷಿಯನ ಚಾಲೆಂಜರ್ಸ, ಜೈ ಹನುಮಾನ ಕ್ರಿಕೆಟರ್ಸ, ಸಾಲಗದ್ದೆ ಸೂಪರ್ ಕಿಂಗ್ಸ ಹಾಗೂ ನೇತಾಜಿ ಕ್ರಿಕೆಟ್ ಕ್ಲಬ್ ಪಂದ್ಯಾವಳಿಯಲ್ಲಿ ಆಡಲಿದೆ.
Tragedy/ ಮುಂಡಳ್ಳಿ ನೆಸ್ತಾರ ಬೀಚ್‌ನಲ್ಲಿ ಅವಘಡ: ಸಮುದ್ರದಲ್ಲಿ ಮುಳುಗಿದ ಯುವಕರು
ತಂಡಗಳು:
ಓಷಿಯನ್ ಚಾಲೆಂಜರ್ಸ್: ಮಾಲಕ ರಮೇಶ ಖಾರ್ವಿ, ಐಕಾನ್ ಮನೋಜ್ ಖಾರ್ವಿ.
ಜೈ ಹನುಮಾನ್ ಕ್ರಿಕೆಟರ್ಸ್: ಮಾಲಕರು ಜೈದೀಪ್ ಶೇಟ್ ಮತ್ತು ಪ್ರೀತಮ್ ಶೇಟ್, ಐಕಾನ್ ಮಹೇಶ ಶೇಟ.
ರಂಜನ್ ಚಾಲೆಂಜರ್ಸ್: ಮಾಲಕರು ಕಿರಣ ಚಂದಾವರ, ಆಂಜನೇಯ ಮತ್ತು ಆತ್ರೆಯ, ಐಕಾನ್ ಪವನ್.
ಸಾಲಗದ್ದೆ ಸೂಪರ್ ಕಿಂಗ್ಸ್: ಮಾಲಕರು ರಾಜೇಶ ಕಾಮತ್ ಮತ್ತು ಶ್ರೇಯಾನ್ ಸುಮಂತ್ ಬಾಳಗಿ, ಐಕಾನ್ ದೀಪಕ ನಾಯಕ.
ಗೋಲ್ಡನ್ ಸ್ಟಾರ್ ಕ್ರಿಕೆಟರ್ಸ: ಮಾಲಕ ಸಂದೀಪ ಶೇಟ, ಐಕಾನ್ ಅಭಿಷೇಕ ಶೇಟ.
ನೇತಾಜಿ ಸ್ಪೋರ್ಟ್ಸ್ ಕ್ಲಬ್: ಮಾಲಕರು ನಕ್ಷತ್ರ ನಿತಿನ್ ಮಹಾಲೆ ಮತ್ತು ನಿತೇಶ್ ಮಹಾಲೆ, ಐಕಾನ್ ಸತ್ಯ ಮಹಾಲೆ.
ಮೇ ೯ರಂದು ಬೆಳಿಗ್ಗೆ ೧೧ ಗಂಟೆಗೆ ಉದ್ಘಾಟನಾ ಕಾರ್ಯಕ್ರಮ ನಡೆಯಲಿದ್ದು, ವಿದ್ಯಾಭಾರತಿ ಶಾಲೆ ಪ್ರಾಂಶುಪಾಲೆ ರೂಪಾ ರಮೇಶ ಖಾರ್ವಿ ಉದ್ಘಾಟಿಸಲಿದ್ದಾರೆ. ವೇದಿಕೆಯಲ್ಲಿ ವಿವಿಧ ಹಿಂದು ಸಮಾಜದ ಕೊಂಕಣಿ ಭಾಷಿಕರೇ ಇರುವ ಮಹಿಳೆಯರು ಉಪಸ್ಥಿತರಿರಲಿದ್ದಾರೆ. ಮೇ ೧೦ರಂದು ಸಮಾರೋಪ ಸಮಾರಂಭದಲ್ಲಿ ಹಾಂಗ್ಯೋ ಐಸ್ ಕ್ರಿಮ್ ಮ್ಯಾನೆಂಜಿಗ್ ಡೈರೆಕ್ಟರ್ ಪ್ರದೀಪ ಪೈ ಅಧ್ಯಕ್ಷತೆ ವಹಿಸಲಿದ್ದು, ವಿವಿಧ ಹಿಂದು ಸಮಾಜದ ಕೊಂಕಣಿ ಭಾಷಿಕರ ಸಮಾಜದ ಅಧ್ಯಕ್ಷರು ವೇದಿಕೆಯಲ್ಲಿ ಉಪಸ್ಥಿತರಿರಲಿದ್ದಾರೆ.
encroachment/ ರುದ್ರಭೂಮಿ ಅತಿಕ್ರಮಣಕ್ಕೆ ಅರಣ್ಯ ಇಲಾಖೆ ಮೌನ: ಜಾಲಿಯ ದೇವಿನಗರದಲ್ಲಿ ಗ್ರಾಮಸ್ಥರ ಆಕ್ರೋಶ



