ಭಟ್ಕಳ ಡೈರಿ ವರದಿ
ಭಟ್ಕಳ: ಸಾರ್ವಜನಿಕ ಸ್ಥಳದಲ್ಲಿ ಓಸಿ ಮಟ್ಕಾ ಜೂಜಾಟ ನಡೆಸುತ್ತಿದ್ದ ಆರೋಪದ ಮೇಲೆ ವ್ಯಕ್ತಿಯೊಬ್ಬನನ್ನು ಭಟ್ಕಳ ಶಹರ ಪೊಲೀಸರು ವಶಕ್ಕೆ ಪಡೆದು, ನಗದು ಹಣ ಹಾಗೂ ಜೂಜಾಟದ ಪರಿಕರಗಳನ್ನು ವಶಪಡಿಸಿಕೊಂಡಿದ್ದಾರೆ. ನವೆಂಬರ್ ೧೭ರಂದು ಮಧ್ಯಾಹ್ನ ಸುಮಾರು ೧೨ ಗಂಟೆಗೆ ಭಟ್ಕಳದ ಸಂಶುದ್ದೀನ್ ಸರ್ಕಲ್ನ ಮಂಜುನಾಥ ಹೋಟೆಲ್ ಎದುರು ಈ ದಾಳಿ ನಡೆದಿದೆ.
ಮಂಜಿನಮನೆಯ, ವ್ಯಾಪಾರಿ ನಾಗರಾಜ ಗಣಪತಿ ಶೇರುಗಾರ (೩೦) ಎಂಬವರು ಸಾರ್ವಜನಿಕರಿಂದ ಹಣ ಸಂಗ್ರಹಿಸಿ, ಓಸಿ ಮಟ್ಕಾ ಜೂಜಾಟದ ಅಂಕಿ-ಸಂಖ್ಯೆಗಳ ಮೇಲೆ ಪಣ ಕಟ್ಟಿಸಿ ಆಟ ಆಡಿಸುತ್ತಿದ್ದರು ಎನ್ನಲಾಗಿದೆ. ಈ ಸಂದರ್ಭದಲ್ಲಿ ಪೊಲೀಸರು ದಾಳಿ ನಡೆಸಿದ್ದು, ಆರೋಪಿತನಿಂದ ₹೧,೨೩೦ ನಗದು ಹಣ ಹಾಗೂ ಓಸಿ ಜೂಜಾಟಕ್ಕೆ ಬಳಸುತ್ತಿದ್ದ ಪರಿಕರಗಳನ್ನು ವಶಪಡಿಸಿಕೊಂಡಿದ್ದಾರೆ. ಈ ಕುರಿತು ಭಟ್ಕಳ ಶಹರ ಪೊಲೀಸ್ ಠಾಣೆಯ ಉಪನಿರೀಕ್ಷಕ ನವೀನ ನಾಯ್ಕ ಅವರು ಸರಕಾರದ ಪರವಾಗಿ ದೂರು ದಾಖಲಿಸಿ ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ.
ಇದನ್ನೂ ಓದಿ :
ಭಟ್ಕಳದಲ್ಲಿ ಕಾಡುಪ್ರಾಣಿಗಳ ಉಪಟಳ: ಜಾನುವಾರುಗಳೇ ಗುರಿ, ಮನುಷ್ಯರಿಗೂ ಕಂಟಕ




