ಭಟ್ಕಳ: ಅಪ್ರಾಪ್ತ ವಯಸ್ಸಿನ ಬಾಲಕನಿಗೆ ದ್ವಿಚಕ್ರ ವಾಹನ ಚಾಲನೆಗೆ ಅವಕಾಶ ಮಾಡಿಕೊಟ್ಟ ಪ್ರಕರಣದಲ್ಲಿ ವಾಹನದ ಮಾಲೀಕರಿಗೆ ನ್ಯಾಯಾಲಯ ದಂಡ ವಿಧಿಸಿದೆ (bike Owner fined). ಮುರುಡೇಶ್ವರ (Murdeshwar) ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಪ್ರಕರಣದಲ್ಲಿ ದ್ವಿಚಕ್ರ ವಾಹನವನ್ನು ಅಪ್ರಾಪ್ತ ಬಾಲಕನಿಂದ ಚಾಲನೆ ಮಾಡಿಸಿದ ಆರೋಪದಡಿ ಬಸ್ತಿ ಕಾಯ್ಕಿಣಿ ನಿವಾಸಿ ರಾಜೇಶ ನಾಗಪ್ಪ ನಾಯ್ಕ ವಿರುದ್ಧ ಪ್ರಕರಣ ದಾಖಲಾಗಿತ್ತು.

Murudeshwar/ ಬೀಚ್‌ನಲ್ಲಿ ಗಾಂಜಾ ಸೇವನೆ: ಯುವಕ ಪೊಲೀಸ್ ವಶಕ್ಕೆ

ಮುರುಡೇಶ್ವರ ಪಿಎಸ್‌ಐ ಹನುಮಂತ ಬಿರಾದಾರ ಅವರು ಮೋಟಾರ್ ವಾಹನ ಕಾಯ್ದೆಯ ಅನ್ವಯ ದೋಷಾರೋಪಣಾ ಪತ್ರವನ್ನು ಭಟ್ಕಳ (Bhatkal) ನ್ಯಾಯಾಲಯಕ್ಕೆ ಸಲ್ಲಿಸಿದ್ದರು. ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯವು ಅಪ್ರಾಪ್ತನಿಗೆ ವಾಹನ ಚಾಲನೆಗೆ ಅವಕಾಶ ಮಾಡಿಕೊಟ್ಟ ಹಿನ್ನೆಲೆ ರಾಜೇಶ ನಾಗಪ್ಪ ನಾಯ್ಕ ಅವರಿಗೆ ₹25 ಸಾವಿರ ದಂಡ ವಿಧಿಸಿ ಆದೇಶಿಸಿದೆ (bike Owner fined).

Train collision/ ರೈಲು ಡಿಕ್ಕಿ: ವೃದ್ಧೆ ಸ್ಥಳದಲ್ಲೇ ಮೃತ್ಯು

ಅಪ್ರಾಪ್ತರಿಗೆ ವಾಹನ ನೀಡುವುದು ಗಂಭೀರ ಅಪರಾಧವಾಗಿದ್ದು, ಇಂತಹ ಪ್ರಕರಣಗಳ ಮೇಲೆ ಮುಂದುವರೆದಂತೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

Bike collision/ ಬೈಕ್ ಡಿಕ್ಕಿ: ಹಿಂಬದಿ ಸವಾರಗೆ ಗಾಯ