ಭಟ್ಕಳ: ತಾಲೂಕಿನ ಕಾಯ್ಕಿಣಿಯ ಗಡಿಮುಂಡ್ಕಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದ ಮಮತಾ ನಾಯಕ ಅವರ ಬೀಳ್ಕೊಡುಗೆ (Farewell) ಸಮಾರಂಭ ಶಾಲೆಯ ಆವರಣದಲ್ಲಿ ಭಾನುವಾರ ಸಂಜೆ ನೆರವೇರಿತು.
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
ಶಾಲಾ ಶಿಕ್ಷಕರು, ಎಸ್ಡಿಎಂಸಿ ಹಾಗೂ ಊರ ನಾಗರಿಕರು ಏರ್ಪಡಿಸಿದ್ದ ಬೀಳ್ಕೊಡುಗೆ (Farewell) ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಹಿರಿಯ ಪತ್ರಕರ್ತ ರಾಧಾಕೃಷ್ಣ ಭಟ್ಟ, ಶಿಕ್ಷಕರ ವೃತ್ತಿ ಅತ್ಯಂತ ಶ್ರೇಷ್ಠವಾದುದಾಗಿದ್ದು, ವೃತ್ತಿಗೆ ನಿವೃತ್ತಿಯೇ ಇಲ್ಲ. ಇಲ್ಲಿ ಮಮತಾ ನಾಯಕ ಅವರು ವಯೋ ನಿವೃತ್ತಿಯನ್ನು ಹೊಂದುತ್ತಿದ್ದು ಅವರ ಆಗಾಧವಾದ ಜ್ಞಾನ ಸಮಾಜಕ್ಕೆ ಒಂದಲ್ಲ ಒಂದು ರೀತಿಯಲ್ಲಿ ದೊರೆಯುತ್ತಿರುತ್ತದೆ ಎಂದರು.
Bhatkal bandh/ ಸ್ವಯಂಪ್ರೇರಿತ ಭಟ್ಕಳ ಬಂದ್ ಕರೆ
ಊರಿನ ಹಿರಿಯರು ಶಿಕ್ಷಣ ಪ್ರೇಮಿಗಳೂ ಆದ ವೆಂಕ್ಟಯ್ಯ ನಾಯ್ಕ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ನಿವೃತ್ತ ಶಿಕ್ಷಕಿ ಮಮತಾ ನಾಯಕ ಅವರು ಮಾತನಾಡಿ, ಕಳೆದ ೨೮ ವರ್ಷಗಳ ಕಾಲ ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿರುವ ಸಂದರ್ಭದಲ್ಲಿ ಊರಿನ ಜನರ ಸಹಕಾರ, ಶಾಲಾ ಮಕ್ಕಳ ಶಿಸ್ತು ಶ್ಲಾಘಿಸಿದರು.
missing/ ಮುರ್ಡೇಶ್ವರದಲ್ಲಿ ತಾಯಿ-ತಂದೆ ಜೊತೆ ಮಲಗಿದ್ದ ಮಗು ನಾಪತ್ತೆ
ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಉಮೇಶ ಕೆರೆಕಟ್ಟೆ ಮಾತನಾಡಿ, ಮಮತಾ ನಾಯಕ ಅವರು ತಮ್ಮ ಶಿಕ್ಷಣ ಇಲಾಖೆಯ ಸೇವೆಯನ್ನು ಮುಗಿಸಿ ಸೇವಾ ನಿವೃತ್ತಿ ಹೊಂದುತ್ತಿರುವುದು ಒಂದು ಬೇಸರದ ಸಂಗತಿಯಾಗಿದೆ. ಶಿಕ್ಷಕರು ಒಂದೇ ಶಾಲೆಯಲ್ಲಿ ಹಲವು ವರ್ಷಗಳ ಕಾರ್ಯ ನಿರ್ವಹಿಸುವುದು ಅಪರೂಪ. ಸುಧೀರ್ಘ ಕಾಲ ಈ ಶಾಲೆಯಲ್ಲಿ ಸೇವೆ ಸಲ್ಲಿಸಿದ ಅವರ ಕಾರ್ಯ ಶ್ಲಾಘನೀಯ ಎಂದರು.
Woman dies/ ಬಾವಿಗೆ ಬಿದ್ದು ಮಹಿಳೆ ಸಾವು
ಕುಮಟಾ ಡಯಟ್‌ನ ಉಪನ್ಯಾಸಕ ಎಸ್ ಪಿ ಭಟ್ ಮಾತನಾಡಿ, ಮಮತಾ ಟೀಚರ್ ಸೇವೆ ಈ ಗ್ರಾಮದವರು ನೆನಪಿನಲ್ಲಿಟ್ಟುಕೊಳ್ಳುವಂತಹದ್ದು. ಅವರ ಮಾನವೀಯ ಗುಣ, ಶಿಕ್ಷಣ ಪ್ರೇಮ, ಹಾಗೂ ಎಲ್ಲ ಮಕ್ಕಳನ್ನು ಪ್ರೀತಿಯಿಂದ ಉತ್ತಮ ಸಂಸ್ಕಾರವಂತರನ್ನಾಗಿಸಿ ಮಾಡಿರುವುದು ಅವರ ಉತ್ತಮ ಗುಣಕ್ಕೆ ಸಾಕ್ಷಿ ಎಂದರು. ಜಿಲ್ಲಾ ಪಂಚಾಯತ್ ಮಾಜಿ ಸದಸ್ಯೆ ಸಿಂಧು ಭಾಸ್ಕರ ನಾಯ್ಕ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಸಂಘಟನಾ ಕಾರ್ಯದರ್ಶಿ ಪೂರ್ಣಿಮಾ ನಾಯ್ಕ, ಸಹ ಕಾರ್ಯದರ್ಶಿ ಜನಾರ್ಧನ ಮೊಗೇರ ಮಾತನಾಡಿದರು.
BJP protest/ ಮುರಿನಕಟ್ಟೆ ಮರು ನಿರ್ಮಾಣಕ್ಕೆ ಆಗ್ರಹಿಸಿ ಬಿಜೆಪಿಯಿಂದ ಬೃಹತ್ ಪ್ರತಿಭಟನಾ ಮೆರವಣಿಗೆ
ವೇದಿಕೆಯಲ್ಲಿ ಎಸ್ ಡಿ ಎಂ ಸಿ ಅಧ್ಯಕ್ಷೆ ದೀಪಾ ಗಜಾನನ ನಾಯ್ಕ, ವಿದ್ಯಾಸಿರಿ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಪುಂಡಲೀಕ ನಾಯ್ಕ, ಶಿಕ್ಷಕ ರಾಮಚಂದ್ರ ನಾಯ್ಕ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಖಜಾಂಚಿ ವಸಂತ ನಾಯ್ಕ ಉಪಸ್ಥಿತರಿದ್ದರು. ಶಾಲೆಯ ವಿದ್ಯಾರ್ಥಿಗಳು ಪ್ರಾರ್ಥನೆ ಹಾಡಿದರು. ಮುಖ್ಯ ಶಿಕ್ಷಕ ಐ ವಿ ಹೆಗಡೆ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಹ ಶಿಕ್ಷಕಿ ಶ್ವೇತಾ ರಾಣೆ ನಿರ್ವಹಿಸಿದರು.
Murinakatte/ ಮುರಿನಕಟ್ಟೆ ವಿವಾದ ಹಿನ್ನೆಲೆ ೫ ಪ್ರಕರಣ ದಾಖಲು; ೪೦ ಮಂದಿ ವಶಕ್ಕೆ
ನಿವೃತ್ತಿ ಹೊಂದಿದ ಮಮತಾ ನಾಯಕ ಅವರನ್ನು ಶಾಲೆಯ ವತಿಯಿಂದ ಶಾಲು, ಫಲ ಪುಷ್ಪ ನೀಡಿ ಗೌರವಿಸಲಾಯಿತು. ಶಿಕ್ಷಕರ ಸಂಘದ ವತಿಯಿಂದ ಅಧ್ಯಕ್ಷರು, ಪದಾಧಿಕಾರಿಗಳು ಸನ್ಮಾನಿಸಿದರು. ವಿವಿಧ ಸಂಘಟನೆಗಳು, ಹಳೆಯ ವಿದ್ಯಾರ್ಥಿಗಳು, ಊರಿನ ನಾಗರಿಕರು ನೆಚ್ಚಿನ ಶಿಕ್ಷಕಿಯನ್ನು ಗೌರವಿಸಿದರು.
Chippikallu tragedy/ ಚಿಪ್ಪಿಕಲ್ಲು ದುರಂತಕ್ಕೆ ಮಂಕಾಳ ವೈದ್ಯ ಕಾರಣ: ಮಾಸ್ತಪ್ಪ ನಾಯ್ಕ ಆರೋಪ



