ತುಂಬಾ ದುಃಖದ ಸಂಗತಿ. ಶಿರಾಲಿಯ ಸರ್ವತೋಮುಖ ಪ್ರಗತಿಗೆ ತಮ್ಮದೇ ಆದ ಅತ್ಯಮೂಲ್ಯ ಸೇವೆಯನ್ನು ಸಲ್ಲಿಸಿದ್ದ ಡಾ ರಮೇಶ ಸರಾಫ (Dr Ramesh Saraf) ಅವರ ಅಗಲಿಕೆ ಸಮಾಜಕ್ಕೆ ಅಪಾರ ನಷ್ಟವಾಗಿದೆ.
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
ಅವರು (Dr Ramesh Saraf) ಭಟ್ಕಳ ತಾಲೂಕಿನ ಪತ್ರಿಕೋದ್ಯಮ, ಸಾಹಿತ್ಯ, ಮಕ್ಕಳ ಬೇಸಿಗೆ ಶಿಬಿರಗಳು, ಮಕ್ಕಳ ಯಕ್ಷಗಾನ ಸೇರಿದಂತೆ ಹಲವು ರಂಗಗಳಲ್ಲಿ ನಿಸ್ವಾರ್ಥ ಸೇವೆ ಸಲ್ಲಿಸಿ ಅನೇಕರಿಗೆ ಪ್ರೇರಣೆಯಾಗಿದ್ದರು. ಭಟ್ಕಳ (Bhatkal) ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ ಹಾಗೂ ಭಟ್ಕಳ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಸೇವೆ ಸಲ್ಲಿಸಿ ಅಪಾರ ಗೌರವಕ್ಕೆ ಪಾತ್ರರಾಗಿದ್ದರು. ಕ್ರಿಯಾಶೀಲತೆ ಮತ್ತು ಸೃಜನಶೀಲತೆ ಅವರ ಬದುಕಿನ ಅಂಗಗಳಾಗಿದ್ದವು. ಅವರ ಸರಳ ವ್ಯಕ್ತಿತ್ವ, ಸಮಾಜಮುಖಿ ಚಿಂತನೆ ಮತ್ತು ಕನ್ನಡದ ಮೇಲಿನ ಅಪಾರ ಅಭಿಮಾನ ಸದಾ ಸ್ಮರಣೀಯವಾಗಿರುತ್ತದೆ. ಅವರ ಅಗಲಿಕೆ ಸಾಹಿತ್ಯ ಹಾಗೂ ಸಾಂಸ್ಕೃತಿಕ ಕ್ಷೇತ್ರಕ್ಕೆ ತುಂಬಲಾರದ ನಷ್ಟವಾಗಿದೆ.
Cattle transporters/ ಅರಣ್ಯ ಇಲಾಖೆ ಜೀಪ್ ಕಂಡೊಡನೆ ಕಾರು ಬಿಟ್ಟು ಪರಾರಿಯಾದ ಜಾನುವಾರು ಸಾಗಾಟಗಾರರು
ನನ್ನ ಪತ್ರಿಕೋದ್ಯಮ ಮತ್ತು ಸಾಹಿತ್ಯ ಕ್ಷೇತ್ರದ ಗುರುಗಳಾಗಿದ್ದು, ನನ್ನನ್ನು ಬೆಳೆಸಿದವರು. ನನ್ನ ಪ್ರತಿಯೊಂದು ಕಾರ್ಯಗಳಿಗೆ ಬೆಂಬಲವಾಗಿ ನಿಂತವರು. ನನ್ನ ಕಲಾಸಿರಿ ಪ್ರತಿಷ್ಠಾನವನ್ನು ಉದ್ಘಾಟಿಸಿ ಮಾರ್ಗದರ್ಶನ ನೀಡಿ ಆಶೀರ್ವದಿಸಿದ್ದರು. ನಮ್ಮ ಕುಟುಂಬದ ವೈದ್ಯರಾಗಿಯೂ ಕೂಡ ಹಲವು ದಶಕಗಳ ಕಾಲ ನಮ್ಮ ಆರೋಗ್ಯಕರ ಜೀವನಕ್ಕೆ ಮಾರ್ಗದರ್ಶಕರಾಗಿದ್ದರು. ಅವರ ಅಗಲಿಕೆ ನಿಜಕ್ಕೂ ನನಗೆ ವೈಯಕ್ತಿಕವಾಗಿ ಅಪಾರ ನಷ್ಟವನ್ನುಂಟು ಮಾಡಿದೆ. ಸಾಹಿತ್ಯದ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವುದಕ್ಕಾಗಿ ನಿನ್ನೆ ಬೆಂಗಳೂರಿಗೆ (Bengaluru ) ಬಂದಿದ್ದೆ. ಇಂದು ಅವರ ಅಂತಿಮ ದರ್ಶನ ಪಡೆಯಲು ಸಾಧ್ಯವಾಗದೇ ಇರುವುದಕ್ಕೆ ಅತೀವ ಶೋಕವೆನಿಸುತ್ತಿದೆ.
Car hit/ ಕಾರಿಗೆ ಹಿಂಬದಿಯಿಂದ ೪೦೭ ವಾಹನ ಡಿಕ್ಕಿ
ಅವರ ಅಂತಿಮ ದರ್ಶನಕ್ಕೆ ಶಿರಾಲಿಯಲ್ಲಿ ವ್ಯವಸ್ಥೆಯನ್ನು ಮಾಡಲಾಗಿದ್ದು, ಮಧ್ಯಾಹ್ನ ೧೨.೩೦ ರಿಂದ ೧ ಗಂಟೆ ಸುಮಾರಿಗೆ ಸಾರ್ವಜನಿಕರು ಅವರ ಅಂತಿಮ ದರ್ಶನ ಪಡೆಯಬಹುದು ಎಂದು ಅವರ ಪುತ್ರ ಪರೇಶ್ ತಿಳಿಸಿದ್ದಾರೆ.
Scooty rider injured/ ನಿಯಂತ್ರಣ ತಪ್ಪಿ ಬಿದ್ದ ಸ್ಕೂಟಿ ಸವಾರಗೆ ಗಾಯ
ಭಗವಂತನು ಅವರ ಆತ್ಮಕ್ಕೆ ಚಿರಶಾಂತಿ ನೀಡಲಿ ಹಾಗೂ ಕುಟುಂಬದವರಿಗೆ ಈ ದುಃಖವನ್ನು ಭರಿಸುವ ಶಕ್ತಿಯನ್ನು ಕರುಣಿಸಲಿ. ಅವರ ಆತ್ಮಕ್ಕೆ ಸದ್ಗತಿ ದೊರಕಲಿ. ಓಂ ಶಾಂತಿ.
– ಶ್ರೀಧರ ಶೇಟ್ ಶಿರಾಲಿ.



