ಭಟ್ಕಳ: ಭಾರತೀಯ ಕಿಸಾನ್ ಸಂಘದ ರಾಜ್ಯ ಮುಖಂಡ, ಭಟ್ಕಳ ತಾಲೂಕು ಕೃಷಿಕ ಸಮಾಜದ ಅಧ್ಯಕ್ಷ (farmer leader) ಹಾಗೂ ಪ್ರಗತಿಪರ ರೈತ, ಹೇರೂರು ಗ್ರಾಮದ ಶ್ರೀಧರ ಎಸ್ ಹೆಬ್ಬಾರ ಹಾಕೋಡ್ಲು (೭೪) ಅನಾರೋಗ್ಯದಿಂದ ಮಣಿಪಾಲದ ಆಸ್ಪತ್ರೆಯಲ್ಲಿ (Manipal Hospital) ಸೋಮವಾರ ಸಂಜೆ ನಿಧರಾದರು (passes away). ಇವರಿಗೆ ಪತ್ನಿ, ಇಬ್ಬರು ಪುತ್ರರು, ಒಬ್ಬಳು ಪುತ್ರಿ ಇದ್ದಾರೆ.
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
ಸದಾ ರೈತರ ಪರವಾಗಿ ಧ್ವನಿ ಎತ್ತುತ್ತಿದ್ದ ಅವರು ಭಟ್ಕಳದಲ್ಲಿ ಭಾರತೀಯ ಕಿಸಾನ್ ಸಂಘ ಶಾಖೆ ಆರಂಭ ಮಾಡಿ ವಿದ್ಯುತ್ ದರ ಏರಿಕೆ ಸೇರಿದಂತೆ ಹಲವು ರೈತಪರ ಹೋರಾಟ ನಡೆಸಿದ್ದರು. ಹವ್ಯಕ ಸಮಾಜದ ಮುಖಂಡರೂ ಆಗಿದ್ದ ಅವರು ಉತ್ತಮ ಸಲಹೆಗಾರರು, ಮಾರ್ಗದರ್ಶಕರೂ ಆಗಿದ್ದರು. ಕಳೆದ ಹಲವು ವರ್ಷಗಳಿಂದ ಭಟ್ಕಳ (Bhatkal) ತಾಲೂಕು ಕೃಷಿಕ ಸಮಾಜದ ಅಧ್ಯಕ್ಷರಾಗಿ, ರೈತರ ಒಡನಾಡಿಯಾಗಿ ಕೆಲಸ ಮಾಡಿ ಮೆಚ್ಚುಗೆ ಗಳಿಸಿದ್ದರು (farmer leader). ಇವರ ನಿಧನಕ್ಕೆ ಹಲವು ಗಣ್ಯರು ಸಂತಾಪ ಸೂಚಿಸಿದ್ದಾರೆ.



