ಬೈಂದೂರು: ಮೀನುಗಾರಿಕೆಗೆ (fishing) ತೆರಳಿದ್ದ ದೋಣಿ ಸಮುದ್ರದ ಭಾರಿ ಅಲೆ ಹೊಡೆತಕ್ಕೆ ಸಿಲುಕಿ ಪಲ್ಟಿಯಾದ ಘಟನೆ ಉಡುಪಿ (Udupi) ಜಿಲ್ಲೆಯ ಬೈಂದೂರು (Byndoor) ತಾಲೂಕಿನ ಉಪ್ಪುಂದ ಮಡಿಕಲ್ ಎಂಬಲ್ಲಿ ನಡೆದಿದೆ. ಅದೃಷ್ಟವಶಾತ್‌ ದೋಣಿಯಲ್ಲಿದ್ದ ೯ ಮೀನುಗಾರರು ಲೈಫ್ ಜಾಕೆಟ್ (life jacket) ಧರಿಸಿದ್ದರಿಂದ ಅಪಾಯದಿಂದ ಪಾರಾಗಿ ದಡ ಸೇರಿದ್ದಾರೆ.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ಉಪ್ಪುಂದ ಮೂಲದ ಚಂದ್ರ ಖಾರ್ವಿ, ಪ್ರಮೋದ್, ಪ್ರಜ್ವಲ್, ಗೌತಮ್, ಭಾಸ್ಕರ, ಯೋಗಿರಾಜ್, ಗೋವಿಂದ, ಬಾಬು ಖಾರ್ವಿ, ದೀಪಕ್ ಅಪಾಯದಿಂದ ಪಾರಾದ ಮೀನುಗಾರರು. ಉಪ್ಪುಂದ ಶಾರದಾ ಖಾರ್ವಿ ಎಂಬವರ ಮಾಲೀಕತ್ವದ ಶಿವಪ್ರಸಾದ್ ದೋಣಿ, ಭಾನುವಾರ ಬೆಳಗ್ಗೆ ೧೧ ಗಂಟೆ ಸುಮಾರಿಗೆ ಮೀನುಗಾರಿಕೆಗೆ ತೆರಳಿತ್ತು. ಮಡಿಕಲ್ ಎಲ್ ಪಿ ಸಮೀಪ ಸಮುದ್ರದ ಅಲೆಗಳ ರಭಸಕ್ಕೆ ದೋಣಿ ಮಗುಚಿ, ದೋಣಿಯಲ್ಲಿ ೯ ಜನ ಮೀನುಗಾರರು (fishermen) ನೀರುಪಾಲಾಗಿದ್ದರು.

ಇದನ್ನು ಓದಿ: Gangolli seashore/ ಗಂಗೊಳ್ಳಿಯಲ್ಲಿ ಇನ್ನೊಂದು ಮೃತದೇಹ ಪತ್ತೆ

ಇತ್ತೀಚೆಗೆ ನಡೆದ ಘಟನೆಗಳನ್ನು ಗಮನದಲ್ಲಿರಿಸಿ ಮೀನುಗಾರರು ಲೈಫ್ ಜಾಕೆಟ್ (life jacket) ಧರಿಸಿದ ಪರಿಣಾಮ ಸಮುದ್ರದಲ್ಲಿ ತೇಲುತ್ತಾ ದಡ ಸೇರುವ ಯತ್ನ ಮಾಡಿದ್ದಾರೆ. ಇದನ್ನು ಗಮನಿಸಿದ ದಡದಲ್ಲಿದ್ದ ಮೀನುಗಾರರು ರೋಪ್‌ ನೀಡಿ ಮೀನುಗಾರರನ್ನು ದಡ ಮುಟ್ಟಿಸಿದ್ದಾರೆ.

ಇದನ್ನು ಓದಿ: Udupi police/ ಉಡುಪಿಯಲ್ಲಿ ಮನೆಗಳ್ಳತನ ಮಾಡಿದ್ದ ಚಿನ್ನಾಭರಣ ಭಟ್ಕಳ, ಶಿರಸಿಯಲ್ಲಿ ಮಾರಾಟ

ಘಟನೆಯಲ್ಲಿ ದೋಣಿಗೆ ಹಾನಿಯಾಗಿದ್ದು, ಎಂಜಿನ್‌, ಬಲೆ ಸಹಿತ ಲಕ್ಷಾಂತರ ರೂಪಾಯಿ ಸಲಕರಣೆ ನಷ್ಟವಾಗಿದೆ. ಘಟನೆಯ ಮಾಹಿತಿ ಪಡೆದ ಕರಾವಳಿ ಕಾವಲು ಪೊಲೀಸ್ ಠಾಣೆಯ ಉಪನಿರೀಕ್ಷಕ ಸುಬ್ರಹ್ಮಣ್ಯ ಹಾಗೂ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.

ಇದನ್ನು ಓದಿ: Case filed/ ಕೋಳಿಯಂಕ ಆಡುತ್ತಿದ್ದ ಮೂವರ ಬಂಧನ, 11 ಜನರ ವಿರುದ್ಧ ಪ್ರಕರಣ ದಾಖಲು