ಭಟ್ಕಳ: ತಾಲೂಕಿನ ಅಳ್ವೆಕೋಡಿ ಬಳಿಯ ನದಿಯಲ್ಲಿ ಚಿಪ್ಪಿಕಲ್ಲಿನ ಮೀನುಗಾರಿಕೆಯಲ್ಲಿ ತೊಡಗಿದ್ದ ೧೧ ಮಂದಿಯ ದಾರುಣ ಸಾವಿಗೆ (Chippikallu tragedy) ಸಚಿವ ಮಂಕಾಳ ವೈದ್ಯ (Mankal Vaidya) ಕಾರಣ ಎಂದು ಸಾಮಾಜಿಕ ಕಾರ್ಯಕರ್ತ ಮಾಸ್ತಪ್ಪ ನಾಯ್ಕ ಗಂಭೀರ ಆರೋಪ ಮಾಡಿದ್ದಾರೆ.
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
ಹೆಬಳೆ-ವೆಂಕಟಾಪುರದ ಕುಕ್ನೀರ ಭಾಗದಲ್ಲಿ ಸಂಪೂರ್ಣವಾಗಿ ಹರಿಯುತ್ತಿದ್ದ ನದಿಯನ್ನು ಉಸ್ತುವಾರಿ ಸಚಿವ ಮಂಕಾಳ ವೈದ್ಯರ ಖಾಸಗಿ ವೈಭೋಗಕ್ಕಾಗಿ ಒಂದು ಬೃಹತ್ ಸೇತುವೆಯನ್ನು ಮಾಡುತ್ತಿದ್ದಾರೆ. ಇದು ಅವರ ಖಾಸಗಿ ಒಡೆತನಕ್ಕಾಗಿ. ಸೇತುವೆ ಕಟ್ಟಲೆಂದು ನದಿ ಭಾಗದಲ್ಲಿ ತಡೆಗೋ ಡೆಯನ್ನು ನಿರ್ಮಿಸಿದ್ದಾರೆ. ಬಲಭಾಗದಲ್ಲಿ ನೀರಿನ ಹರಿವು ಸಂಪೂರ್ಣ ಕಡಿಮೆ ಆಗಿದೆ. ನದಿಯ ಹೊರ ಹರಿವು ಕಮ್ಮಿಯಾಗಿ ಸಮುದ್ರ ಮಟ್ಟದ ನೀರು ಏರುತ್ತಿದ್ದಂತೆ ಆ ಸಮಯಕ್ಕೆ ಅಬ್ಬರದ ನೀರು ಅಳ್ವೆಕೋಡಿ ಹೊಳೆಯನ್ನು ಸೇರಿದೆ ಎಂದು ಅವರು ಆರೋಪಿಸಿದ್ದಾರೆ.
BJP protest/ ಮೇ ೨೯ರಂದು ಭಟ್ಕಳದಲ್ಲಿ ಬಿಜೆಪಿ ಪ್ರತಿಭಟನೆ
ಈ ಅವೈಜ್ಞಾನಿಕ ಕಾಮಗಾರಿ ನಡೆಸಿ ಈ ರಾಜವೈಭೋಗ ಪಡೆಯಲು ಮಂಕಾಳ ವೈದ್ಯರಿಗೆ ಹೆಬಳೆ ಪಂಚಾಯತ್‌ನವರು ಮತ್ತು CRZನವರು ಯಾವ ರೀತಿಯಲ್ಲಿ ಪರವಾನಗಿ ಕೊಟ್ಟರು? ಅಥವಾ ಪರವಾನಗಿ ಪಡೆಯದೇ ಉಸ್ತುವಾರಿ ಸಚಿವರು ಎನ್ನುವ ಅಮಲಿನಲ್ಲಿ ಇಂತಹ ಒಂದು ದುರ್ಘಟನೆಗೆ ಮುಂದಾದರೆ? ಎಂದು ಮಾಸ್ತಪ್ಪ ನಾಯ್ಕ ಪ್ರಶ್ನಿಸಿದ್ದಾರೆ.
Murinakatte incident/ ಭಟ್ಕಳದಲ್ಲಿ ಪೊಲೀಸರ ಪಥ ಸಂಚಲನ
ಮಂಕಾಳ ವೈದ್ಯರು ತಮ್ಮ ಅಧಿಕಾರ ಬಲದಿಂದ ನಮ್ಮನ್ನು ತುಳಿಯಬಹುದು ಎನ್ನುವ ಭಯದಿಂದ ಜನರು ಇದನ್ನು ಪ್ರಶ್ನಿಸುತ್ತಿಲ್ಲ. ಇದರ ಬಗ್ಗೆ ನಾವು ಒಂದು ತನಿಖೆಗೆ ಆಗ್ರಹಿಸಬೇಕು. ಇಂದು ನಾವೆಲ್ಲ ಚಿಪ್ಪಿಕಲ್ಲು ದುರಂತದಲ್ಲಿ (Chippikallu tragedy) ಮಾಡಿದವರ ಸತ್ತವರ ಆತ್ಮಕ್ಕೆ ಶಾಂತಿ ಕೋರುತ್ತಿದ್ದೇವೆ. ಶ್ರದ್ಧಾಂಜಲಿ ಅರ್ಪಿಸುತ್ತಿದ್ದೇವೆ. ಆದರೆ ಯಾಕೆ ಇದರ ಮೂಲ ಕಾರಣ ಹುಡುಕಬಾರದು? ಎಂದು ಮಾಸ್ತಪ್ಪ ನಾಯ್ಕ ಪ್ರಕಟಣೆಯಲ್ಲಿ ಪ್ರಶ್ನೆ ಮಾಡಿದ್ದಾರೆ.



