ಉಡುಪಿ: ಉಡುಪಿ ಪುತ್ತೂರು ಗ್ರಾಮದ ಕೊಡಂಕೂರು ನ್ಯೂ ಕಾಲೋನಿಯಲ್ಲಿ ನಡೆದ ಕಳ್ಳತನ ನಡೆಸಿ ಪರಾರಿಯಾಗಿದ್ದ ಅಂತಾರಾಜ್ಯ ಮನೆ ಕಳ್ಳನನ್ನು ಉಡುಪಿ ಪೊಲೀಸರು (Udupi police) ವಶಕ್ಕೆ ಪಡೆದಿದ್ದಾರೆ. ಮೊಹಮ್ಮದ್ ಆಸೀಫ್ ಬೆಟಗೇರಿ ಬಂಧಿತ ಅಂತಾರಾಜ್ಯ ಮನೆಗಳ್ಳತನದ ಆರೋಪಿ.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ಜುಲೈ 5ರಂದು ಉಡುಪಿ ಪುತ್ತೂರು ಗ್ರಾಮದ ಕೊಡಂಕೂರು ನ್ಯೂ ಕಾಲೋನಿಯಲ್ಲಿ ಮಧ್ಯರಾತ್ರಿಯಲ್ಲಿ ಆರೋಪಿ ಮೊಹಮ್ಮದ್ ಆಸೀಫ್ ತನ್ನ ಜೊತೆಗಾರರೊಂದಿಗೆ 3 ಮನೆಗಳ ಬೀಗವನ್ನು ಮುರಿದು ಆ ಮನೆಗಳಲ್ಲಿರುವ ಚಿನ್ನಾಭರಣ ಮತ್ತು ಬೆಳ್ಳಿಯ ಆಭರಣ ಹಾಗೂ ನಗದು ಹಣವನ್ನು ಕಳ್ಳತನ ಮಾಡಿ ಪರಾರಿಯಾಗಿದ್ದ. ಬಳಿಕ ಕದ್ದ ವಸ್ತುಗಳನ್ನು ಭಟ್ಕಳ (Bhatkal) ಹಾಗೂ ಶಿರಸಿ (Sirsi) ಕಡೆಗಳಲ್ಲಿ ಮಾರಾಟ ಮಾಡಿ ಹಣವನ್ನು ಪಡೆದಿದ್ದಾನೆ.

ಇದನ್ನು ಓದಿ: Case filed/ ಕೋಳಿಯಂಕ ಆಡುತ್ತಿದ್ದ ಮೂವರ ಬಂಧನ, 11 ಜನರ ವಿರುದ್ಧ ಪ್ರಕರಣ ದಾಖಲು

ಈ ಕುರಿತು ದೂರು ದಾಖಲಾದ ಹಿನ್ನಲೆಯಲ್ಲಿ ಕಾರ್ಯಾಚರಣೆ ನಡೆಸಿದ ಉಡುಪಿ ಪೊಲೀಸರು (Udupi police) ಆರೋಪಿಯನ್ನು ಬಂಧಿಸಿದ್ದಾರೆ. ಅಲ್ಲದೇ ಆರೋಪಿ ಭಟ್ಕಳ ಹಾಗೂ ಶಿರಸಿ ನಗರದಲ್ಲಿ ಕಳವು ಮಾಡಿ ವಿಲೇವಾರಿ ಮಾಡಿದ ಸುಮಾರು 8.50 ಲಕ್ಷ ರೂಪಾಯಿ ಮೌಲ್ಯದ ಅಂದಾಜು 95.5 ಗ್ರಾಂ ಚಿನ್ನಾಭರಣ, 255 ಗ್ರಾಂ ಬೆಳ್ಳಿಯನ್ನು ವಶಕ್ಕೆ ಪಡೆದು ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

ಇದನ್ನು ಓದಿ: Fisherman’s body found/ ಹೊನ್ನೇಗದ್ದೆಯ ಸಮುದ್ರ ತೀರದಲ್ಲಿ ಮೀನುಗಾರನ ಮೃತದೇಹ ಪತ್ತೆ

ತನಿಖೆ ವೇಳೆ ಈತ ಶಿವಮೊಗ್ಗ (shivamogga) ಜಿಲ್ಲೆಯ ಸಾಗರ (Sagar) ಟೌನ್‌ ಪೊಲೀಸ್‌ ಠಾಣೆ, ದಾವಣಗೆರೆ (Davanagere) ಜಿಲ್ಲೆ ನ್ಯಾಮತಿ (Nyamati) ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಮನೆಕಳವು ಮಾಡಿರುವುದಾಗಿಯೂ, ಈ ಹಿಂದೆ ಗೋವಾದಲ್ಲಿ (Goa) 4 ಪ್ರಕರಣಗಳು, ಉತ್ತರ ಪ್ರದೇಶ (Uttar Pradesh) ರಾಜ್ಯದಲ್ಲಿಯೂ ಕೂಡ ಕಳವು ಹಾಗೂ ಇತರ ಪ್ರಕರಣಗಲ್ಲಿ ತಾನೂ ಹಾಗೂ ತನ್ನ ಸಹೋದರ ಆರೀಫ್‌, ಅನೀಸ್‌ ಹಾಗೂ ಸಂಬಂದಿ ಸಲೀಂ, ಶೋಯೆಬ್‌ ಎಲ್ಲರೂ ಭಾಗಿಯಾಗಿರುವುದಾಗಿ ಒಪ್ಪಿಕೊಂಡಿದ್ದಾನೆ. ಸದ್ಯ ಆರೋಪಿ ಆಸೀಫ್ ಸಹೋದರ ಆರೀಫ್ ಹಾಗೂ ಇತರರು ತಲೆಮರೆಸಿ ಕೊಂಡಿದ್ದು, ಇವರ ಪತ್ತೆಯ ಕಾರ್ಯಚರಣೆ ಮುಂದುವರಿದಿದೆ.

ಇದನ್ನು ಓದಿ: fishermen missing/ ದೋಣಿ ಮುಳುಗಿ ನಾಲ್ವರು ಮೀನುಗಾರರು ನಾಪತ್ತೆ