ಭಟ್ಕಳ: ತಾಲೂಕಿನ ನೀರಕಂಠ ಭಾಗದ ಬಪ್ಪುಂಡ ಗ್ರಾಮದಲ್ಲಿ ಪಕ್ಕದ ಮನೆಯ ನಾಯಿಯಿಂದ ಉಂಟಾಗುತ್ತಿದ್ದ ಹಾನಿ ವಿಚಾರಕ್ಕೆ ಸಂಬಂಧಿಸಿ ಪ್ರಶ್ನಿಸಿದ ಮಹಿಳೆಯ ಮೇಲೆ ಹಲ್ಲೆ (assaulted) ನಡೆಸಿರುವ ಬಗ್ಗೆ ಭಟ್ಕಳ (Bhatkal) ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ಭವಾನಿ ಮಾದೇವ ಮೊಗೇರ ಅವರು ಈ ಕುರಿತು ಪಕ್ಕದ ಮನೆಯವರಾದ ಶ್ರೀನಿವಾಸ ಅವರ ವಿರುದ್ಧ ದೂರು ದಾಖಲಿಸಿದ್ದಾರೆ. ಶ್ರೀನಿವಾಸ ಮಂಜುನಾಥ ಅವರ ಮನೆಯ ನಾಯಿಯಿಂದ ತಮ್ಮ ಮನೆಗೆ ಪದೇಪದೇ ಹಾನಿಯಾಗುತ್ತಿದೆ ಎಂದು ತಿಳಿಸಿದ್ದಾರೆ. ಈ ಬಗ್ಗೆ ಹಲವು ಬಾರಿ ಅಸಮಾಧಾನ ವ್ಯಕ್ತಪಡಿಸಿದ್ದರೂ ಸಮಸ್ಯೆ ಪರಿಹಾರವಾಗಿಲ್ಲ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

Black panther/ ಭಟ್ಕಳದಲ್ಲಿ ವೃದ್ಧನ ಮೇಲೆ ಕಪ್ಪು ಚಿರತೆ ದಾಳಿ

ಇದೇ ವಿಚಾರವಾಗಿ ಮಾತನಾಡಲು ಮಹಿಳೆ ಶ್ರೀನಿವಾಸ ಅವರ ಮನೆಗೆ ತೆರಳಿದ ವೇಳೆ ಮಾತಿನ ಚಕಮಕಿ ತೀವ್ರಗೊಂಡು, ಶ್ರೀನಿವಾಸ ಅವರು ಹಲ್ಲೆ (assaulted) ನಡೆಸಿದ್ದಾರೆ ಎನ್ನಲಾಗಿದೆ. ಹಲ್ಲೆಯಿಂದ ಮಹಿಳೆಗೆ ಗಾಯಗಳಾಗಿದ್ದು, ವಿಶೇಷವಾಗಿ ಕೈಗೆ ತೀವ್ರ ಪೆಟ್ಟು ಬಿದ್ದ ಪರಿಣಾಮ ದಿನನಿತ್ಯದ ಕೆಲಸಗಳನ್ನು ನಿರ್ವಹಿಸಲು ಅಸಾಧ್ಯವಾಗಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ.

seed bank/ ಸಾಂಪ್ರದಾಯಿಕ ಭತ್ತದ ತಳಿಗಳ ಸಂರಕ್ಷಣೆಗಾಗಿ ಸ್ಕೊಡ್‌ವೆಸ್‌ನಿಂದ ಬೀಜ ಬ್ಯಾಂಕ್‌ ಲೋಕಾರ್ಪಣೆ

ಘಟನೆಯ ವೇಳೆ ಮಹಿಳೆ ನೆಲಕ್ಕುರುಳಿದ್ದು, ಪಕ್ಕದ ಮನೆಯವರು ಧಾವಿಸಿ ರಕ್ಷಣೆ ಮಾಡಿದ್ದಾರೆ. ಆರೋಪಿಯು ಈ ಹಿಂದೆಯೂ ಇದೇ ರೀತಿಯಲ್ಲಿ ವರ್ತಿಸಿದ್ದಾನೆ ಎಂದು ದೂರಿನಲ್ಲಿ ಹೇಳಲಾಗಿದೆ. ಮನೆಯಲ್ಲಿದ್ದ ಗಂಡಸರು ಇಲ್ಲದ ಸಂದರ್ಭಗಳಲ್ಲಿ ಇಂತಹ ಘಟನೆಗಳನ್ನು ನಡೆಸುತ್ತಿದ್ದಾನೆ ಎಂಬುದೂ ಆರೋಪವಾಗಿದೆ.

Islamic flag/ ಹಸಿರು ಬಾವುಟ ತೆರವಿಗೆ ಮುಸ್ಲಿಮರ ಆಕ್ಷೇಪ: ಮತ್ತೆ ಬಾವುಟ ಹಾರಾಟಕ್ಕೆ ಪೊಲೀಸರ ತಡೆ