ಭಟ್ಕಳ: ಮಾರ್ಚ್ ೨೬ರಿಂದ ೨೯ರ ತನಕ ಖೇಲೋ ಇಂಡಿಯಾ ಅಸ್ಮಿತಾ ಕಿಕ್ ಬಾಕ್ಸಿಂಗ್ (kickboxing) ಸ್ಪರ್ಧೆಯು ಚೆನ್ನೈನ (chennai) ವಿನಾಯಕ ಮಿಷನ್ಸ್ ರಿಸರ್ಚ್ ಫೌಂಡೇಷನ್ ಒಳಾಂಗಣ ಕ್ರೀಡಾಂಗಣದಲ್ಲಿ ಮುಕ್ತಾಯಗೊಂಡಿತು. ಚಿನ್ನದ ಪದಕ (gold medal) ಪಡೆದ ವಿಜೇತರಿಗೆ ೧೨೦೦೦ ರೂ ಮತ್ತು ಬೆಳ್ಳಿ ಪದಕ (silver medal) ಪಡೆದ ವಿಜೇತರಿಗೆ ೧೦೦೦೦ ರೂ ಹಾಗೂ ಕಂಚಿನ (bronze medal) ಪದಕ ಪಡೆದ ವಿಜೇತರಿಗೆ ೮೦೦೦ ರೂ ನಗದು ಬಹುಮಾನಗಳನ್ನು ನೀಡಲಾಯಿತು.
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
ಈ ಸ್ಪರ್ಧೆಯಲ್ಲಿ ಉತ್ತರ ಕನ್ನಡ (Uttara Kannada) ಜಿಲ್ಲಾ ಕಿಕ್ ಬಾಕ್ಸಿಂಗ್ ಸ್ಪೋರ್ಟ್ಸ್ ಅಸೋಸಿಯೇಷನ್ ನ ಭಟ್ಕಳ (Bhatkal) ತಾಲೂಕಿನ ನಾಗಶ್ರೀ ಮಾರ್ಷಲ್ ಆರ್ಟ್ಸ್ ನ ಮಹಿಳಾ ಪಟುಗಳು ಭಾಗವಹಿಸಿ ಕಂಚಿನ ಪದಕ ಪಡೆದುಕೊಂಡಿದ್ದಾರೆ. ಇಬ್ಬರು ಕಿಕ್ ಬಾಕ್ಸಿಂಗ್ (kickboxing) ಪಟುಗಳು ಒಂದು ಪಾಯಿಂಟ್ ಅಂತರದಿಂದ ಪದಕಕ್ಕೆ ವಂಚಿತರಾದರು.
assaulted/ ನಾಯಿಯಿಂದ ಉಪಟಳ ಪ್ರಶ್ನಿಸಿದ ಮಹಿಳೆಯ ಮೇಲೆ ಹಲ್ಲೆ
ಲಿಖಿತಾ ಶಂಕರ ನಾಯ್ಕ ಜೂನಿಯರ್ ವಿಭಾಗದ -೪೫ಕೆಜಿ ಪಾಯಿಂಟ್ ಫೈಟ್ ನಲ್ಲಿ ಕಂಚಿನ ಪದಕ, ಅಖಿಲಾ ಚಂದ್ರಕಾಂತ ನಾಯಕ ಸೀನಿಯರ್ ವಿಭಾಗದ -೪೫ ಕೆಜಿ ಪಾಯಿಂಟ್ ಫೈಟ್ ನಲ್ಲಿ ಒಂಭತ್ತನೇ ಸ್ಥಾನ, ಸಮೀಕ್ಷಾ ಮಾಸ್ತಿ ಗೊಂಡ ಸಬ್ ಜೂನಿಯರ್ ವಿಭಾಗದ -೩೭ಕೆಜಿ ಲೈಟ್ ಕಾಂಟ್ಯಾಕ್ಟ್ ನಲ್ಲಿ ಐದನೇ ಸ್ಥಾನ, ಮನಾಲಿ ರಾಜು ನಾಯ್ಕ ಜೂನಿಯರ್ ವಿಭಾಗದ -೪೨ಕೆಜಿ ಲೈಟ್ ಕಾಂಟ್ಯಾಕ್ಟ್ ನಲ್ಲಿ ಐದನೇ ಸ್ಥಾನ ಪಡೆದುಕೊಂಡಿದ್ದಾರೆ.
Black panther/ ಭಟ್ಕಳದಲ್ಲಿ ವೃದ್ಧನ ಮೇಲೆ ಕಪ್ಪು ಚಿರತೆ ದಾಳಿ
ನಾಗಶ್ರೀ ನಾಯ್ಕ ಈ ಸ್ಪರ್ಧೆಯಲ್ಲಿ ರೆಫರಿಯಾಗಿ ಕಾರ್ಯನಿರ್ವಹಿಸಿದರು. ಉತ್ತರ ಕನ್ನಡ ಜಿಲ್ಲಾ ಕಿಕ್ ಬಾಕ್ಸಿಂಗ್ ಸ್ಪೋರ್ಟ್ಸ್ ಅಸೋಸಿಯೇಷನ್ ಅಧ್ಯಕ್ಷ ಈಶ್ವರ ನಾಯ್ಕ, ತರಬೇತುದಾರರಾದ ನಾಗಶ್ರೀ ನಾಯ್ಕ, ಕಾನೂನು ಸಲಹೆಗಾರರಾದ ಮನೋಜ ನಾಯ್ಕ ಮತ್ತು ಉಮೇಶ ಮೊಗೇರ, ಎಲ್ಲಾ ಪದಾಧಿಕಾರಿಗಳು ಮಹಿಳಾ ಕಿಕ್ ಬಾಕ್ಸಿಂಗ್ ಪಟುಗಳ ಸಾಧನೆಗೆ ಹರ್ಷ ವ್ಯಕ್ತಪಡಿಸಿದ್ದಾರೆ.
seed bank/ ಸಾಂಪ್ರದಾಯಿಕ ಭತ್ತದ ತಳಿಗಳ ಸಂರಕ್ಷಣೆಗಾಗಿ ಸ್ಕೊಡ್‌ವೆಸ್‌ನಿಂದ ಬೀಜ ಬ್ಯಾಂಕ್ ಲೋಕಾರ್ಪಣೆ



