ಭಟ್ಕಳ: ತಾಲೂಕಿನ ಸರ್ಪನಕಟ್ಟೆಯಲ್ಲಿರುವ ವಾಸುಕಿ ಸರ್ಪ ದೇವಸ್ಥಾನದ ವರ್ಧಂತ್ಯುತ್ಸವ (Vardhanthi utsava) ಹಾಗೂ ಗುರುವಂದನಾ ಕಾರ್ಯಕ್ರಮವನ್ನು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿ ಯತಿರಾಜ ಜೀಯರ್ ಸ್ವಾಮಿ ಆಶೀರ್ವಚನ ನೀಡಿದರು.
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
”ರಾಮಾನುಜಾಚಾರ್ಯರ ಪರಂಪರೆ ಶಾಖೆ ಈ ವಾಸುಕಿ ದೇವಸ್ಥಾನದಲ್ಲಿ ಆರಂಭವಾಗಿರುವುದು ಮಠದ ಇತಿಹಾಸದ ಸುವರ್ಣಾಕ್ಷರದಲ್ಲಿ ಬರೆದಿಡುವಂತಹದ್ದು. ಇದು ಅಕ್ಷರಶಃ ಶ್ರೀಕ್ಷೇತ್ರವಾಗಿದೆ. ಇಲ್ಲಿಗೆ ರಾಮಾನುಜಾಚಾರ್ಯರ ಅನುಗ್ರಹ ಸಿಕ್ಕಿದೆ. ಪ್ರತಿ ಬಾರಿ ಭಟ್ಕಳಕ್ಕೆ (Bhatkal) ಬಂದಾಗ ವಿಶೇಷ ಸಂತೋಷ, ತೃಪ್ತಿ ಉಂಟಾಗುತ್ತದೆ. ಹಿಂದಿನ ಯತಿಗಳು ಭಟ್ಕಳಕ್ಕೆ ಭೇಟಿ ನೀಡಿದ್ದರು. ಇದೀಗ ಮತ್ತೆ ಈ ಕ್ಷೇತ್ರದೊಂದಿಗೆ ಆತ್ಮೀಯ ಬಾಂಧವ್ಯ ಬೆಸೆದಿರುವುದು ಸಂತಸದ ಸಂಗತಿ. ವಾಸುಕಿ ದೇವಸ್ಥಾನ ಧರ್ಮ ಕ್ಷೇತ್ರವಾಗಿ ಬೆಳೆಯಲಿದೆ. ಬೇರೆಡೆಗಳಿಗೆ ಹೋದಾಗ ಭಟ್ಕಳದ ಜನರ ಪ್ರೀತಿಯನ್ನು ಹೆಮ್ಮೆಯಿಂದ ಹೇಳುತ್ತೇವೆ” ಎಂದರು.
grand procession/ ಭಟ್ಕಳ ಗಂಜಿಮಾರಿಯಮ್ಮ ದೇವಾಲಯದಲ್ಲಿ ಬೆಳ್ಳಿ ಕವಚ ಸಮರ್ಪಣೆ, ಶೋಭಾಯಾತ್ರೆ ವಿಜೃಂಭಣೆ
ಮೇಲುಕೋಟೆ ಜಗದ್ಗುರು ಶ್ರೀ ರಾಮಾನುಜಾಚಾರ್ಯ ಮಹಾಸಂಸ್ಥಾನದ ಆಸ್ತಾನ ವಿದ್ವಾನ್ ರಂಗರಾಮಾನುಜ ಸ್ವಾಮಿ ಮಾತನಾಡಿ, “ಕಲಿಯುಗದಲ್ಲಿಯೇ ರಾಮಾನುಜಾಚಾರ್ಯರೊಂದಿಗೆ ಆದಿಶೇಷನ ಸಂಬಂಧ ಬೆಸೆದಿರುವುದು ಸೋಜಿಗ. ಭಟ್ಕಳಕ್ಕೆ ರಾಮಾನುಜಾಚಾರ್ಯರು ಬಂದಿರುವ ಉಲ್ಲೇಖಗಳಿವೆ. ಇದೊಂದು ಪುಣ್ಯಕ್ಷೇತ್ರ” ಎಂದರು. ನಾಮಧಾರಿ ಸಮಾಜದ ಮಾಜಿ ಅಧ್ಯಕ್ಷ ಡಿ ಬಿ ನಾಯ್ಕ ಹಾಗೂ ಎಂ ಆರ್ ನಾಯ್ಕ ಮಾತನಾಡಿ, “800 ವರ್ಷದ ಹಿಂದೆ ರಾಮಾನುಜಾಚಾರ್ಯರ ಪಾದಸ್ಪರ್ಶದಿಂದಲೇ ನಮ್ಮ ಗುರುಮಠ ರೂಪುಗೊಂಡಿದೆ ಎನ್ನುವುದು ಹಿರಿಯರ ನಂಬಿಕೆ. ಆ ಸಂಬಂಧವನ್ನು ಶಿರಸಾ ಮುಂದುವರಿಸುತ್ತೇವೆ” ಎಂದರು.
ಮಾಜಿ ಶಾಸಕ ಸುನೀಲ ನಾಯ್ಕ ಮಾತನಾಡಿ, “ಸ್ಥಳೀಯ ಯುವಕರ ಶ್ರಮದಿಂದ ವಾಸುಕಿ ದೇವಸ್ಥಾನ ಧರ್ಮ ಕ್ಷೇತ್ರವಾಗಿ ಬೆಳೆಯುತ್ತಿದೆ. ಸಮಾಜದ ಒಳಒಡಕುಗಳನ್ನು ಸರಿಪಡಿಸಿ ಎಲ್ಲರನ್ನು ಒಗ್ಗೂಡಿಸುವ ಕೆಲಸ ಗುರುಗಳಿಂದ ಆಗಲಿ” ಎಂದು ಮನವಿ ಮಾಡಿದರು.
Makkala Santhe/ ಮಕ್ಕಳ ಸಂತೆಯಲ್ಲಿ ತರಕಾರಿ, ಒಣಮೀನು ಭರ್ಜರಿ ಮಾರಾಟ
ಇದಕ್ಕೂ ಮೊದಲು ಚೆನ್ನಪಟ್ಟಣ ಹನುಮಂತ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಬೈಕ್ ರ‍್ಯಾಲಿ ಮೂಲಕ ಸ್ವಾಮಿಗಳನ್ನು ಕರೆತರಲಾಯಿತು. ಸೋಡಿಗದ್ದೆ ಕ್ರಾಸ್‌ನಿಂದ ಡಕ್ಕೆ ಕುಣಿತ, ಚಂಡೆ, ಕುಣಿತ ಭಜನೆಗಳೊಂದಿಗೆ ಮಹಿಳೆಯರಿಂದ ಪೂರ್ಣಕುಂಭ ಸ್ವಾಗತ ನೀಡಿ ವಾಸುಕಿ ದೇವಸ್ಥಾನಕ್ಕೆ ಕರೆತರಲಾಯಿತು. ಗುರುಪಾದುಕಾ ಪೂಜೆ, ಗುರುಭಿಕ್ಷೆ, ಫಲಕಾಣಿಕೆ ಸಮರ್ಪಣೆ ನೆರವೇರಿತು. ವರ್ಧಂತ್ಯುತ್ಸವ (Vardhanthi utsava) ನಿಮಿತ್ತ ದೇವಸ್ಥಾನಕ್ಕೆ ದೇಣಿಗೆ ನೀಡಿದ ಭಕ್ತರನ್ನು ಯತಿರಾಜ ಜೀಯರ್ ಸ್ವಾಮಿ ಸನ್ಮಾನಿಸಿದರು.
Rare turtle/ ಬಲೆಗೆ ಸಿಲುಕಿದ ಅಪರೂಪದ ಆಮೆ
ಎಸ್ ಎಂ ನಾಯ್ಕ, ಸತೀಶ ನಾಯ್ಕ ಮಣ್ಕುಳಿ, ಮಾದೇವ ನಾಯ್ಕ, ಶಾಂತಾರಾಮ ನಾಯ್ಕ ಜಾಲಿ, ರಾಜೇಶ ನಾಯ್ಕ ಮುಂಡಳ್ಳಿ, ಸುಭಾಶ ಶೆಟ್ಟಿ, ನಾಗಪ್ಪ ನಾಯ್ಕ, ದೇವಸ್ಥಾನದ ಅಧ್ಯಕ್ಷ ಗಜಾನನ ನಾಯ್ಕ ಸೇರಿದಂತೆ ಅನೇಕರು ಉಪಸ್ಥಿತರಿದ್ದರು. ಶಿಕ್ಷಕ ಪರಮೇಶ್ವರ ನಾಯ್ಕ ನಿರೂಪಿಸಿದರೆ, ಉಮೇಶ ನಾಯ್ಕ ಸ್ವಾಗತಿಸಿ, ಸೀತಾರಾಮ ನಾಯ್ಕ ವಂದಿಸಿದರು.



