ಭಟ್ಕಳ: ಪಟ್ಟಣದ ಹಿರಿಯ ಮುಖಂಡ, ಸಮಾಜ ಸೇವಕ, ಹಲವು ಸಂಘ–ಸಂಸ್ಥೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದ ಸೈಯದ್ ಹಸನ್ ಬರ್ಮಾವರ್ (೭೩) ಬುಧವಾರ ಮಧ್ಯಾಹ್ನ ನಿಧನರಾದರು (passes away).

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ಅವರು ಕಳೆದ ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದು, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ (passes away) ಎಂದು ಕುಟುಂಬ ಮೂಲಗಳು ತಿಳಿಸಿವೆ. ಸೈಯದ್ ಹಸನ್ ಬರ್ಮಾವರ್ ಅವರು ಭಟ್ಕಳ (Bhatkal) ಪುರಸಭೆಯ (TMC) ಸದಸ್ಯರಾಗಿ ಸೇವೆ ಸಲ್ಲಿಸಿ ರಾಜಕೀಯ (political) ಕ್ಷೇತ್ರದಲ್ಲಿಯೂ ಗುರುತಿಸಿಕೊಂಡಿದ್ದರು. ಜನತಾದಳ (janatha dal) ಪಕ್ಷದ ಜಿಲ್ಲಾ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷರಾಗಿಯೂ ಕಾರ್ಯನಿರ್ವಹಿಸಿದ್ದರು. ಜನತಾ ಪರಿವಾರದ ಹಿನ್ನೆಲೆಯುಳ್ಳ ಇವರಿಗೆ ಆರ್ ವಿ ದೇಶಪಾಂಡೆ (R V Deshpande), ಬಸವರಾಜ ಹೊರಟ್ಟಿ (Basavaraj Horatti) ಸೇರಿದಂತೆ ವಿವಿಧ ರಾಜಕೀಯ ಮುಖಂಡರೊಂದಿಗೆ ಸ್ನೇಹಪೂರ್ಣ ಸಂಬಂಧವಿತ್ತು.

Woman injured/ ದುಡುಕಿನ ಚಾಲನೆಗೆ ಮಹಿಳೆಗೆ ಗಾಯ; ಬೈಕ್ ಸವಾರನ ವಿರುದ್ಧ ಪ್ರಕರಣ

ಇಸ್ಲಾಮಿಕ್ ವೆಲ್ಫೇರ್ ಸೊಸೈಟಿ, ವೆಲ್ಫೇರ್ ಆಸ್ಪತ್ರೆ ಹಾಗೂ ಶಮ್ಸ್ ಸ್ಕೂಲ್ ಸಂಸ್ಥೆಗಳ ಸ್ಥಾಪಕ ಸದಸ್ಯರಾಗಿದ್ದರು. ಜಾಮಿಯಾಬಾದ್‌ನ ನ್ಯೂ ಶಮ್ಸ್ ಶಾಲೆಗೆ ಭೂಮಿ ಒದಗಿಸುವಲ್ಲಿ ಇವರ ಪಾತ್ರ ಮಹತ್ವದ್ದಾಗಿತ್ತು ಎನ್ನಲಾಗಿದೆ. ಜಮಾಅತೆ ಇಸ್ಲಾಮಿ ಹಿಂದ್‌ನ ಸಮಾಜಸೇವಾ ಚಟುವಟಿಕೆಗಳಲ್ಲಿ ಮುಂಚೂಣಿಯಲ್ಲಿದ್ದರು.

Murdeshwar/ ಮುರ್ಡೇಶ್ವರಕ್ಕೆ ಲಯನ್ಸ್ ಗವರ್ನರ್ ಭೇಟಿ: ಪ್ರಶಸ್ತಿ ಪ್ರದಾನ, ಸನ್ಮಾನ

ತಮ್ಮ ಜೀವನದ ಬಹುಪಾಲನ್ನು ಸಮಾಜಸೇವೆಗೆ ಮೀಸಲಿಟ್ಟಿದ್ದ ಅವರು ಅನೇಕ ಬಡ ಕುಟುಂಬಗಳಿಗೆ ಮನೆ ನಿರ್ಮಿಸಲು ಸಹಾಯ ಮಾಡಿದ್ದರು. ಸಹಾಯಕ್ಕಾಗಿ ಮನೆಗೆ ಬಂದವರನ್ನು ನಿರಾಸೆಗೊಳಿಸದ ವ್ಯಕ್ತಿಯಾಗಿದ್ದರು. ಇವರ ನಿಧನಕ್ಕೆ ಅನೇಕ ಗಣ್ಯರು ಸಂತಾಪ ವ್ಯಕ್ತಪಡಿಸಿದ್ದಾರೆ.

vardhanthi utsava/ ಶ್ರೀ ವಲ್ಮೀಕ ನಾಗ-ಚೌಡೇಶ್ವರಿ ದೇವಸ್ಥಾನದ ೫ನೇ ವರ್ಷದ ವರ್ಧಂತಿ ಉತ್ಸವ ಏ ೧ರಂದು