ಭಟ್ಕಳ: ನಗರದ ಹೊಂಡದಕೇರಿ ಪ್ರದೇಶದಲ್ಲಿ ಚನ್ನಪಟ್ಟಣ ಹನುಮಂತ ದೇವರ ಪಲ್ಲಕ್ಕಿ ಮೆರವಣಿಗೆ ವೇಳೆ ಕಲ್ಲೆಸೆತ (Stone pelting) ನಡೆದಿರುವ ಬಗ್ಗೆ ವರದಿಯಾಗಿದೆ.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ರಾಮನವಮಿ (Rama Navami) ರಥೋತ್ಸವದ ಅಂಗವಾಗಿ ನಗರದಾದ್ಯಂತ ಹನುಮಂತ ದೇವರ ಪಲ್ಲಕ್ಕಿ ಮೆರವಣಿಗೆ ನಡೆಯುತ್ತಿರುವ ಸಂದರ್ಭದಲ್ಲಿ, ಶಾಂತಿಯುತವಾಗಿ ಸಾಗುತ್ತಿದ್ದ ಮೆರವಣಿಗೆಯ ಮೇಲೆ ಏಕಾಏಕಿ ಕಲ್ಲುಗಳನ್ನು ಎಸೆದಿರುವುದಾಗಿ (Stone pelting) ವರದಿ ಉಲ್ಲೇಖಿಸಿದೆ. ಅದೃಷ್ಟವಶಾತ ಕಲ್ಲುಗಳು ಪಲ್ಲಕ್ಕಿಗೆ ತಗುಲಿಲ್ಲ. ಆದರೆ ಕೆಲಕಾಲ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು ಎಂದು ಹೇಳಲಾಗಿದೆ.

passes away/ ಸಮಾಜಸೇವಕ ಸೈಯದ್ ಹಸನ್ ಬರ್ಮಾವರ್ ನಿಧನ

ಘಟನೆಯ ವೇಳೆ ಸ್ಥಳದಲ್ಲಿದ್ದ ಪೊಲೀಸರು ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದಿದ್ದಾರೆ. ಶಾಂತಿ ಸುವ್ಯವಸ್ಥೆಗೆ ಯಾವುದೇ ಧಕ್ಕೆ ಉಂಟಾಗದಂತೆ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಕೆಲ ಕಿಡಿಗೇಡಿ ಬಾಲಕರು ಈ ಕೃತ್ಯದಲ್ಲಿ ಭಾಗಿಯಾಗಿರುವ ಬಗ್ಗೆ ಶಂಕೆ ಇದೆ. ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಆದರೆ ಯಾವುದೇ ಪೊಲೀಸ್ ದೂರು ದಾಖಲಾಗಿಲ್ಲ.

Woman injured/ ದುಡುಕಿನ ಚಾಲನೆಗೆ ಮಹಿಳೆಗೆ ಗಾಯ; ಬೈಕ್ ಸವಾರನ ವಿರುದ್ಧ ಪ್ರಕರಣ

ಕಳೆದ ಶನಿವಾರ ಈ ಘಟನೆ ನಡೆದಿದೆ ಎನ್ನಲಾಗುತ್ತಿದ್ದು, ಸಾಮಾಜಿಕ ಜಾಲತಾಣದಲ್ಲಿ ಚರ್ಚೆಯಾಗಿದೆ. ದೇವಸ್ಥಾನದ ಆಡಳಿತ ಮಂಡಳಿ ದೂರು ದಾಖಲಿಸದೇ ಮಗುಮ್ಮಾಗಿರುವ ಬಗ್ಗೆ ಆಕ್ರೋಶ ವ್ಯಕ್ತವಾಗಿದೆ.

Murdeshwar/ ಮುರ್ಡೇಶ್ವರಕ್ಕೆ ಲಯನ್ಸ್ ಗವರ್ನರ್ ಭೇಟಿ: ಪ್ರಶಸ್ತಿ ಪ್ರದಾನ, ಸನ್ಮಾನ

ಮಾಧ್ಯಮಕ್ಕೆ ಪ್ರತಿಕ್ರಿಯಿಸಿರುವ ಭಟ್ಕಳ ಶಹರ ಠಾಣೆಯ ಪಿಐ ದಿವಾಕರ ಪಿ, ಹೊಂಡದಕೇರಿ ಪ್ರದೇಶದಲ್ಲಿ ಪಲ್ಲಕ್ಕಿ ಮೆರವಣಿಗೆ ವೇಳೆ ಕಲ್ಲೆಸೆತ ನಡೆದಿರುವ ಪ್ರಕರಣ ತಮ್ಮ ಗಮನಕ್ಕೆ ಬಂದಿರುವ ಬಗ್ಗೆ ತಿಳಿಸಿದ್ದಾರೆ. ಈ ಕುರಿತು ದೇವಸ್ಥಾನ ಸಮಿತಿಯವರೊಂದಿಗೆ ಸಭೆ ನಡೆಸಿ ಚರ್ಚಿಸಲಾಗಿದೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸ್ ಇಲಾಖೆ ಸಮರ್ಥವಾಗಿ ಕ್ರಮ ಕೈಗೊಳ್ಳುತ್ತಿದೆ. ಸಾರ್ವಜನಿಕರು ಆತಂಕಪಡಬೇಕಿಲ್ಲ. ಅನುಮಾನಿತ ಬಾಲಕರ ಪೋಷಕರನ್ನು ಕರೆಸಿ ಎಚ್ಚರಿಕೆ ನೀಡಲಾಗಿದೆ ಎಂದು ಹೇಳಿದ್ದಾರೆ. ಸಮಿತಿಯವರು ದೂರು ನೀಡಿದರೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದೂ ತಿಳಿಸಿದ್ದಾರೆ.

vardhanthi utsava/ ಶ್ರೀ ವಲ್ಮೀಕ ನಾಗ-ಚೌಡೇಶ್ವರಿ ದೇವಸ್ಥಾನದ ೫ನೇ ವರ್ಷದ ವರ್ಧಂತಿ ಉತ್ಸವ ಏ ೧ರಂದು

ಈ ಘಟನೆ ಬಗ್ಗೆ ಆತಂಕ, ಅಸಮಾಧಾನ ವ್ಯಕ್ತಪಡಿಸಿರುವ ಜನರು, ೧೯೯೩ರಲ್ಲಿ ನಗರದಲ್ಲಿ ನಡೆದ ಇದೇ ರಥೋತ್ಸವದ ವೇಳೆ ಕಲ್ಲೆಸೆತದಿಂದ ಉಂಟಾದ ಸುದೀರ್ಘ ಗಲಾಟೆಯನ್ನು ಸ್ಮರಿಸುತ್ತಿದ್ದಾರೆ. ಇಂತಹ ಘಟನೆಗಳು ಮರುಕಳಿಸದಂತೆ ಎಲ್ಲರೂ ಜಾಗ್ರತೆ ವಹಿಸಬೇಕೆಂದು ಎಚ್ಚರಿಸಿದ್ದಾರೆ.

autorickshaws/ ಭಟ್ಕಳದಲ್ಲಿ ಎಲ್‌ಪಿಜಿ ಪೂರೈಕೆ ಸ್ಥಗಿತ: ರಸ್ತೆಗಿಳಿಯದ ಆಟೋರಿಕ್ಷಾಗಳು