ಭಟ್ಕಳ: ಆಧಾರ್ ಕಾರ್ಡ್ಗೆ (Aadhar card) ಸಂಬಂಧಿಸಿದ ಪರಿಶೀಲನೆ, ತಿದ್ದುಪಡಿ, ಬಯೋಮೆಟ್ರಿಕ್ ನವೀಕರಣ ಸೇರಿದಂತೆ ವಿವಿಧ ಸೇವೆಗಳನ್ನು ಪಡೆಯಲು ಉತ್ತರ ಕನ್ನಡ (Uttara Kannada) ಜಿಲ್ಲೆಯ ಜನರು ಎದುರಿಸುತ್ತಿರುವ ತೊಂದರೆಗಳನ್ನು ನಿವಾರಿಸುವ ನಿಟ್ಟಿನಲ್ಲಿ ಜಿಲ್ಲೆಯ ಮಧ್ಯಭಾಗದಲ್ಲಿ ಶಾಶ್ವತ ಹಾಗೂ ಸುಸಜ್ಜಿತ ಆಧಾರ್ ಸೇವಾ ಕೇಂದ್ರ (Aadhar centre) ಸ್ಥಾಪಿಸುವಂತೆ ಆಗ್ರಹಿಸಿ ಭಟ್ಕಳ ಸಾರ್ವಜನಿಕರು (Bhatkal people) ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ (MP Kageri) ಅವರಿಗೆ ಮನವಿ ಸಲ್ಲಿಸಿದರು.
Chippikallu tragedy/ ಚಿಪ್ಪಿಕಲ್ಲು ದುರಂತ ಸಂತ್ರಸ್ತರಿಗೆ ಬೆಂಗಳೂರಿಗರ ನೆರವು
ಸೋಮವಾರ ಭಟ್ಕಳಕ್ಕೆ ಆಗಮಿಸಿದ್ದ ಸಂಸದರನ್ನು ಭೇಟಿಯಾದ ಸಾರ್ವಜನಿಕರು, ಆಧಾರ್ಗೆ (Aadhar card) ಸಂಬಂಧಿಸಿದ ಕೆಲ ಗಂಭೀರ ಸಮಸ್ಯೆಗಳಿಗೆ ಪರಿಹಾರ ಪಡೆಯಲು ಜಿಲ್ಲೆಯ ಜನರು ಬೆಂಗಳೂರಿನ (Bengaluru) ಸಂಬಂಧಿತ ವ್ಯವಸ್ಥೆಯನ್ನು ಸಂಪರ್ಕಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಗಮನ ಸೆಳೆದರು.
Taxi Drivers and Owners/ ಭಟ್ಕಳ ಟ್ಯಾಕ್ಸಿ ಚಾಲಕ–ಮಾಲಕರ ಸಂಘಕ್ಕೆ ನೂತನ ಪದಾಧಿಕಾರಿಗಳ ಆಯ್ಕೆ
ಆಧಾರ್ ಇಂದು ಸರ್ಕಾರಿ ಯೋಜನೆಗಳು, ಬ್ಯಾಂಕಿಂಗ್ ಸೇವೆ, ಪಿಂಚಣಿ, ವಿದ್ಯಾರ್ಥಿವೇತನ, ಮೊಬೈಲ್ ಸಂಪರ್ಕ ಸೇರಿದಂತೆ ಹಲವು ಅಗತ್ಯ ಸೇವೆಗಳಿಗೆ ಪ್ರಮುಖ ಗುರುತಿನ ದಾಖಲೆಯಾಗಿದೆ. ಆದರೆ, ಆಧಾರ್ ಪರಿಶೀಲನೆ ವೇಳೆ ಲಿಮಿಟ್ ಕ್ರಾಸ್ ಆಗಿರುವುದು ಅಥವಾ ಹೆಚ್ಚುವರಿ ಪರಿಶೀಲನೆ ಅಗತ್ಯವಿರುವ ಪ್ರಕರಣಗಳಲ್ಲಿ ಸ್ಥಳೀಯವಾಗಿ ಪರಿಹಾರ ದೊರೆಯದೆ ಬೆಂಗಳೂರಿಗೆ ತೆರಳಬೇಕಾಗುತ್ತಿದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.
new DySP/ ಐಪಿಎಸ್ ಅಧಿಕಾರಿ ಭಟ್ಕಳದ ಹೊಸ ಡಿವೈಎಸ್ಪಿ
ವಿಶಾಲ ಭೌಗೋಳಿಕ ವ್ಯಾಪ್ತಿಯನ್ನು ಹೊಂದಿರುವ ಉತ್ತರ ಕನ್ನಡ ಜಿಲ್ಲೆಯಲ್ಲಿ ಕರಾವಳಿ, ಮಲೆನಾಡು ಹಾಗೂ ಒಳನಾಡು ಪ್ರದೇಶಗಳಿದ್ದು, ದೂರದ ತಾಲೂಕುಗಳಿಂದ ಬೆಂಗಳೂರಿಗೆ ತೆರಳುವುದು ಸಾರ್ವಜನಿಕರಿಗೆ ಸಮಯ ಮತ್ತು ಆರ್ಥಿಕವಾಗಿ ಹೊರೆಯಾಗುತ್ತಿದೆ. ದಿನಗೂಲಿ ಕಾರ್ಮಿಕರು, ಸಣ್ಣ ವ್ಯಾಪಾರಿಗಳು, ಮಹಿಳೆಯರು, ವಯೋವೃದ್ಧರು ಹಾಗೂ ಗ್ರಾಮೀಣ ಪ್ರದೇಶದ ಜನರು ಇದರಿಂದ ಹೆಚ್ಚಿನ ತೊಂದರೆ ಅನುಭವಿಸುತ್ತಿದ್ದಾರೆ. ಒಂದು ಬಾರಿ ತೆರಳಿದರೂ ಸಮಸ್ಯೆ ಬಗೆಹರಿಯದಿದ್ದರೆ ಮತ್ತೆ ಬೆಂಗಳೂರಿಗೆ ತೆರಳಬೇಕಾದ ಅನಿವಾರ್ಯತೆ ಎದುರಾಗುತ್ತಿದೆ ಎಂದು ಸಾರ್ವಜನಿಕರು ಹೇಳಿದರು.
Forecast/ ಕರಾವಳಿಯಲ್ಲಿ ಮಳೆ ಇಳಿಕೆ; ಅಲ್ಲಲ್ಲಿ ತುಂತುರು ಮಳೆ ಸಾಧ್ಯತೆ
ಜಿಲ್ಲೆಯ ಮಧ್ಯಭಾಗದಲ್ಲಿ, ವಿಶೇಷವಾಗಿ ಕಾರವಾರದಲ್ಲಿ, ಸುಸಜ್ಜಿತ ಆಧಾರ್ ಸೇವಾ ಕೇಂದ್ರವನ್ನು (Aadhar centre) ಸ್ಥಾಪಿಸಿದರೆ ಜಿಲ್ಲೆಯ ಎಲ್ಲ ಭಾಗಗಳ ಜನರಿಗೆ ಅನುಕೂಲವಾಗಲಿದೆ. ಆಧಾರ್ ಪರಿಶೀಲನೆ, ಬಯೋಮೆಟ್ರಿಕ್ (biometric) ನವೀಕರಣ, ತಿದ್ದುಪಡಿ, ಮೊಬೈಲ್ ಸಂಖ್ಯೆ ಹಾಗೂ ವಿಳಾಸ ಬದಲಾವಣೆ ಸೇರಿದಂತೆ ಅಗತ್ಯ ಸೇವೆಗಳು ಒಂದೇ ಸೂರಿನಡಿ ದೊರೆಯುವಂತಾಗಬೇಕು. ಇದರಿಂದ ಸಾರ್ವಜನಿಕರ ಸಮಯ ಮತ್ತು ಹಣ ಉಳಿತಾಯವಾಗುವುದಲ್ಲದೆ, ಬೆಂಗಳೂರಿಗೆ ತೆರಳುವ ಅನಿವಾರ್ಯತೆ ಕಡಿಮೆಯಾಗಲಿದೆ. ಗ್ರಾಮೀಣ ಭಾಗದ ಜನರಿಗೆ ಸೇವೆ ಸುಲಭವಾಗಿ ಲಭ್ಯವಾಗಲಿದ್ದು, ಆಧಾರ್ ಸೇವೆಗಾಗಿ ಮಧ್ಯವರ್ತಿಗಳ ಮೊರೆ ಹೋಗುವ ಪರಿಸ್ಥಿತಿಯೂ ಕಡಿಮೆಯಾಗಲಿದೆ ಎಂದು ಮನವಿಯಲ್ಲಿ ಉಲ್ಲೇಖಿಸಲಾಗಿದೆ.
fighting cancer/ ಕ್ಯಾನ್ಸರ್ ವಿರುದ್ಧ ಹೋರಾಡಿ ಕಾಲು ಉಳಿಸಿದ ವೈದ್ಯರ ಸಾಧನೆ
ಈ ಸಂದರ್ಭದಲ್ಲಿ ಶ್ರೀನಿವಾಸ ನಾಯ್ಕ ಹನುಮಾನನಗರ, ಶ್ರೀಕಾಂತ ನಾಯ್ಕ, ಮಾದೇವ ನಾಯ್ಕ ಪುರವರ್ಗ, ಆರ್ಟಿಐ ಕಾರ್ಯಕರ್ತ ನಾಗೇಂದ್ರ ನಾಯ್ಕ, ಪರಮೇಶ್ವರ ನಾಯ್ಕ ಕಂಡೆಕೊಡ್ಲು, ಜಯಂತ ನಾಯ್ಕ, ಈಶ್ವರ ನಾಯ್ಕ ಆಸರಕೇರಿ, ಪಾಂಡುರಂಗ ನಾಯ್ಕ, ಸುರೇಂದ್ರ ಪೂಜಾರಿ, ವಸಂತ ನಾಯ್ಕ, ದಿನೇಶ ಮೋಗೇರ ಸೇರಿದಂತೆ ಹಲವರು ಸಂಸದರ ಗಮನಕ್ಕೆ ವಿಷಯ ತಂದರು. ಮನವಿಗೆ ಸ್ಪಂದಿಸಿದ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು, ಈ ಕುರಿತು ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಚರ್ಚಿಸಿ ಅಗತ್ಯ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.
Devotional Songs/ ಕುಂದಾಪುರದಲ್ಲಿ ಜನಮನ ಸೆಳೆದ ಗುರುರಾಯರ ಭಕ್ತಿ ಗಾನಾಮೃತ
