ಭಟ್ಕಳ: ನಗರದ ನ್ಯಾಯಾಲಯ ಸಂಕೀರ್ಣದಲ್ಲಿ ನೂತನವಾಗಿ ನಿರ್ಮಾಣವಾಗುತ್ತಿರುವ ನ್ಯಾಯಾಲಯಗಳ ಕಟ್ಟಡಕ್ಕೆ (court building) ಕರ್ನಾಟಕ (Karnataka) ಉಚ್ಚ ನ್ಯಾಯಾಲಯದ (High court) ಮುಖ್ಯ ನ್ಯಾಯಮೂರ್ತಿ ವಿಬು ಖಬ್ರು ಅಡಿಗಲ್ಲು ಇಟ್ಟರು. ಧಾರ್ಮಿಕ ವಿಧಿವಿಧಾನಗಳೊಂದಿಗೆ ಪೂಜೆ ಸಲ್ಲಿಸಿ ಭೂಮಿ ಪೂಜೆ ನೆರವೇರಿಸಿ ನ್ಯಾಯಾಲಯಗಳ ಕಟ್ಟಡ (court building) ನಿರ್ಮಾಣಕ್ಕೆ ಚಾಲನೆ ನೀಡಲಾಯಿತು.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಉಚ್ಚ ನ್ಯಾಯಾಲಯದ ನ್ಯಾಯಾಧೀಶ ಹಾಗೂ ಜಿಲ್ಲಾ ಉಸ್ತುವಾರಿ ನ್ಯಾಯಾಧೀಶ ಸಚಿನ್ ಶಂಕರ ಮಗದುಮ್ ವಹಿಸಿದ್ದರು. ಉಚ್ಚ ನ್ಯಾಯಾಲಯದ ನ್ಯಾಯಾಧೀಶ ಎಸ್ ಜಿ ಪಂಡಿತ, ಅನಂತ ರಾಮನಾಥ ಹೆಗಡೆ, ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ (Mankal Vaidya), ಉಚ್ಚ ನ್ಯಾಯಾಲಯದ ರಜಿಸ್ಟ್ರಾರ್ ಕೆ ಎಸ್ ಭರತಕುಮಾರ, ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ (district judge) ಪರಮೇಶ್ವರ ಪ್ರಸನ್ನ ಬಿ ಉಪಸ್ಥಿತರಿದ್ದರು.

kickboxing/ ಭಟ್ಕಳದ ನಾಗಶ್ರೀ ಮಾರ್ಷಲ್ ಆರ್ಟ್ಸ್ ನ ಕಿಕ್ ಬಾಕ್ಸಿಂಗ್ ಮಹಿಳಾ ಪಟುಗಳ ಸಾಧನೆ

ಜಿಲ್ಲಾಧಿಕಾರಿ ಲಕ್ಷ್ಮಿ ಪ್ರಿಯ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದೀಪನ ಎಂ ಎನ್, ಹಿರಿಯ ಸಿವಿಲ್ ನ್ಯಾಯಾಧೀಶ ಕಾಂತ ಕುರಣಿ, ಪ್ರಧಾನ ನ್ಯಾಯಾಧೀಶೆ ದೀಪಾ ಅರಳಗುಂಡಿ, ಹೆಚ್ಚುವರಿ ನ್ಯಾಯಾಧೀಶೆ ಧನವತಿ, ನಗರಸಭಾ ಆಯುಕ್ತ ಬಾಬಾಸಾಹೇಬ್ ಮಾಣೆ, ಸಹಾಯಕ ಆಯುಕ್ತ ಪ್ರವೀಣ ಕರಾಂಡೆ, ತಹಶೀಲ್ದಾರ ನಾಗೇಂದ್ರ ಕೋಳಶೆಟ್ಟಿ ಸೇರಿದಂತೆ ಹಲವರು ಭಾಗವಹಿಸಿದ್ದರು.

assaulted/ ನಾಯಿಯಿಂದ ಉಪಟಳ ಪ್ರಶ್ನಿಸಿದ ಮಹಿಳೆಯ ಮೇಲೆ ಹಲ್ಲೆ

ಕಾರ್ಯಕ್ರಮವನ್ನು ನ್ಯಾಯವಾದಿ ನಾಗರಾಜ ಈ ಎಚ್ ನಿರ್ವಹಿಸಿದರು. ಪಲ್ಲವಿ ಕಿಣಿ ಮತ್ತು ತೇಜಸ್ವಿ ಕಿಣಿ ಯಕ್ಷಗಾನ (yakshagana) ಶೈಲಿಯಲ್ಲಿ ಸ್ವಾಗತ ನೃತ್ಯ ನೀಡಿದರು. ದರ್ಗಾಶ್ರೀ ಚಂಡೆ ತಂಡ ಹಾಗೂ ಕಾನ್ಲಮದ್ಲು ತಂಡದ ಢಕ್ಕೆ ಕುಣಿತ ಕಾರ್ಯಕ್ರಮಕ್ಕೆ ಮೆರಗು ನೀಡಿತು.

Black panther/ ಭಟ್ಕಳದಲ್ಲಿ ವೃದ್ಧನ ಮೇಲೆ ಕಪ್ಪು ಚಿರತೆ ದಾಳಿ