ಭಟ್ಕಳ: ತಾಲೂಕಿನ ಕೋಣಾರ ಗ್ರಾಮ ಪಂಚಾಯತ್ ವ್ಯಾಪ್ತಿಯ ಕೋಣಾರದ ವಸತಿ ಪ್ರದೇಶದಲ್ಲಿರುವ ಮಂಜುನಾಥ ಹೆಬ್ಬಾರ್ ಅವರ ಮನೆಯ ರಸ್ತೆಯಲ್ಲಿ ಚಿರತೆಗಳ (Leopards) ಓಡಾಟದ ದೃಶ್ಯ ಸಿಸಿಟಿವಿಯಲ್ಲಿ ಸರಿಯಾಗಿದೆ.
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
ರವಿವಾರ ರಾತ್ರಿ ೧೧ ಗಂಟೆಯ ಸುಮಾರಿಗೆ ಕೋಣಾರದ ಮಂಜುನಾಥ ಹೆಬ್ಬಾರ್ ಅವರ ಮನೆಯಲ್ಲಿ ಅಳವಡಿಸಲಾಗಿದ್ದ ಸಿಸಿಟಿವಿಯಲ್ಲಿ (CCTV) ಎರಡು ಚಿರತೆಗಳು (Leopards) ಒಂದಾದ ನಂತರ ಒಂದರಂತೆ ಅವರ ಮನೆಗೆ ಬರುವ ರಸ್ತೆಯಲ್ಲಿ ಗಾಂಭೀರ್ಯದಿಂದ ನಡೆದುಕೊಂಡು ಬರುತ್ತಿರುವ ದೃಶ್ಯ ದಾಖಲಾಗಿದೆ. ದಾಖಲಾಗಿತ್ತು. ಇದನ್ನು ಕಂಡ ಮನೆಯವರು ಗಾಬರಿಯಾಗಿದ್ದಾರೆ.
Mankal Vaidya/ ‘ಸಾಮಾಜಿಕ ಜಾಲತಾಣದಲ್ಲಿ ಬರೆಯುವವರು ಬರೆದುಕೊಳ್ಳಲಿ’
ಇದನ್ನು ತಿಳಿಯುತ್ತಲೇ ಗ್ರಾಮಸ್ಥರು ಜಾಗೃತರಾದರು. ಗ್ರಾಮದಲ್ಲಿ ಚಿರತೆ ಕಾಣಿಸಿಕೊಂಡಿರುವುದು ಸಂಜೆಯ ಓಡಾಡುವುದಕ್ಕೂ ಹೆದರಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಈಗಾಗಲೇ ಊರಿನಲ್ಲಿರುವ ನಾಯಿಯೊಂದು ಕಣ್ಮರೆಯಾಗಿದ್ದು ಚಿರತೆಗೆ ಆಹಾರವಾಯಿತೇ? ಎನ್ನುವುದು ಗ್ರಾಮಸ್ಥರ ಸಂಶಯವಾಗಿದೆ.
Woman death/ ಮುರುಡೇಶ್ವರದ ಮಹಿಳೆ ಸಾವಿಗೆ ಹೊಟ್ಟೆನೋವು ಕಾರಣವಾಯ್ತು
ಕಳೆದ ಕೆಲವು ದಿನಗಳಿಂದ ಈ ಭಾಗದಲ್ಲಿ ಚಿರತೆಯ ಓಡಾಟವನ್ನು ಅರಣ್ಯ ಇಲಾಖೆಯೂ (forest department) ಕೂಡಾ ಗಮನಿಸಿದೆ. ಸಿಬ್ಬಂದಿ ರಾತ್ರಿ ಗಸ್ತು ಹೋಗುವ ಸಮಯದಲ್ಲಿ ಚಿರತೆಗಳು ಆ ಭಾಗದಲ್ಲಿ ಕಾಣಿಸಿಕೊಂಡಿದ್ದು ಆಹಾರ ಆರಸಿ ಬರುತ್ತಿವೆ ಎಂದು ಹೇಳಿದ್ದಾರೆ. ಜನವಸತಿ ಪ್ರದೇಶಕ್ಕೆ ಬಂದರೆ ಹಾಗೂ ಜನ ಜಾನುವಾರುಗಳಿಗೆ ತೊಂದರೆ ಕೊಟ್ಟರೆ ಅವುಗಳನ್ನು ಅಲ್ಲಿಂದ ಸ್ಥಳಾಂತರಿಸಲು ಇಲಾಖೆ ಕ್ರಮ ಕೈಗೊಳ್ಳಲಿದೆ. ಹಾಲಿ ಚಿರತೆಗಳನ್ನು ರಾತ್ರಿ ಗಸ್ತು ಹೆಚ್ಚು ಮಾಡಿ ಆ ಭಾಗದಿಂದ ದಟ್ಟಡವಿಯ ಕಡೆಗೆ ಹೋಗುವಂತೆ ಪಟಾಕಿ ಸಿಡಿಸುವ ಮೂಲಕ ಕ್ರಮ ಕೈಗೊಳ್ಳಲಾಗಿದೆ.
Admissions/ ಭಟ್ಕಳದ ಶ್ರೀ ಗುರು ಸುಧೀಂದ್ರ ಕಾಲೇಜಿನಲ್ಲಿ ಪದವಿ ತರಗತಿಗಳಿಗೆ ಪ್ರವೇಶಾತಿ ಆರಂಭ



