ಭಟ್ಕಳ: ನಗರದ ಮುಖ್ಯ ರಸ್ತೆಯಲ್ಲಿರುವ ಅರ್ಬನ್ ಬ್ಯಾಂಕ್ ಸಮೀಪದ ಸಯ್ಯದ್ ಕಾಜ್ಮಿ ಟವರ್‌ನಲ್ಲಿ ಆಯೋಜಿಸಲಾದ “ನಿತ್ಯ ಹಲಸು ಮೇಳ”ಕ್ಕೆ (Jackfruit Mela) ಹಿರಿಯ ಪತ್ರಕರ್ತ ರಾಧಾಕೃಷ್ಣ ಭಟ್ಟ ಚಾಲನೆ ನೀಡಿದರು. ಹಲಸಿನ ಗಿಡಕ್ಕೆ ನೀರು ಹಾಕುವ ಮೂಲಕ ಮೇಳವನ್ನ ಉದ್ಘಾಟಿಸಲಾಯಿತು.
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಸಾಮಾನ್ಯವಾಗಿ ಹಲಸು ಮತ್ತು ಮಾವಿನ ಹಣ್ಣುಗಳು ಋತುಮಾನಕ್ಕೆ ಮಾತ್ರ ಲಭ್ಯವಾಗುವವು. ಇತ್ತೀಚಿನ ದಿನಗಳಲ್ಲಿ ಅವುಗಳ ಲಭ್ಯತೆ ಕಡಿಮೆಯಾಗಿದೆ. ಆದರೆ ಮಾರ್ಚ್ ತಿಂಗಳಲ್ಲಿಯೇ ವಿವಿಧ ರುಚಿಯ ಹಲಸಿನ ಹಣ್ಣುಗಳನ್ನು ಒದಗಿಸುವ ಮೂಲಕ ಸ್ಥಳೀಯ ಜನತೆಗೆ ಹೊಸ ಅನುಭವ ನೀಡುತ್ತಿರುವ ಬೆಳಕೆಯ ಪಾಂಡುರಂಗ ನಾಯ್ಕ ಅವರ ಪ್ರಯತ್ನ ಶ್ಲಾಘನೀಯ ಎಂದು ಹೇಳಿದರು.
elected/ ಗುರುಕೃಪಾ ಪತ್ತಿನ ಸಹಕಾರಿ ಸಂಘಕ್ಕೆ ನೂತನ ಅಧ್ಯಕ್ಷ-ಉಪಾಧ್ಯಕ್ಷರ ಅವಿರೋಧ ಆಯ್ಕೆ
ಸಮಾಜ ಸೇವಕ ನಜೀರ್ ಕಾಶಿಮಜಿ ಮಾತನಾಡಿ, ಹಲಸು ಮತ್ತು ಮಾವು ಜನಪ್ರಿಯ ಹಣ್ಣುಗಳಾಗಿದ್ದು, ಸಾಮಾನ್ಯವಾಗಿ ಮಳೆಗಾಲದಲ್ಲಿ ಮಾತ್ರ ಹೆಚ್ಚು ದೊರೆಯುವ ಹಲಸನ್ನು ಈಗಲೇ ಲಭ್ಯವಾಗುವಂತೆ ಮಾಡಿರುವುದು ವಿಶೇಷ. ಸ್ಥಳೀಯರು ಈ ಅವಕಾಶವನ್ನು ಬಳಸಿಕೊಳ್ಳಬೇಕು ಎಂದು ಅವರು ಅಭಿಪ್ರಾಯಪಟ್ಟರು.
punctuality/ ಯುವಕನ ಸಮಯಪ್ರಜ್ಞೆ: ಮಹಿಳೆ ಅಪಾಯದಿಂದ ಪಾರು
ಈ ಹಲಸು ಮೇಳದ (Jackfruit Mela) ರೂವಾರಿ ಪಾಂಡುರಂಗ ನಾಯ್ಕ, ಅಬ್ದುಲ್ ವಾಸಿಫ್, ಲಕ್ಕಿ ಫ್ಯಾಮಿಲಿಯ ಸದಸ್ಯರು, ರಿಜ್ವಾನ್, ಭಟ್ಕಳ ಎಜ್ಯುಕೇಶನ್ ಟ್ರಸ್ಟ್ ಅಧ್ಯಕ್ಷ ಡಾ ಸುರೇಶ ನಾಯಕ, ಹಿರಿಯ ವೈದ್ಯೆ ಡಾ ಸವಿತಾ ಕಾಮತ, ಸನಾ ಆಪ್ಟಿಶಿಯನ್ಸ್‌ನ ಅಬ್ದುಲ್ ಜಬ್ಬಾರ್ ಸೇರಿದಂತೆ ಹಲವರು ಭಾಗವಹಿಸಿ ಶುಭ ಹಾರೈಸಿದರು.
Chariot Festival/ ಭಟ್ಕಳ ಶ್ರೀ ಚನ್ನಪಟ್ಟಣ ಹನುಮಂತ ದೇವರ ಬ್ರಹ್ಮ ರಥೋತ್ಸವಕ್ಕೆ ಸಂಭ್ರಮದ ತಯಾರಿ
ಹಲಸು ಸೀಸನ್ ಮುಗಿಯುವವರೆಗೆ ಮೇಳವನ್ನು ಮುಂದುವರಿಸುವ ಉದ್ದೇಶವನ್ನು ಆಯೋಜಕರು ಹೊಂದಿದ್ದು, ಮುಂದಿನ ದಿನಗಳಲ್ಲಿ ಮಾವು ಸೇರಿದಂತೆ ವಿವಿಧ ಹಣ್ಣುಗಳು ಹಾಗೂ ಹಣ್ಣುಗಳಿಂದ ತಯಾರಿಸಲಾದ ಹಲ್ವಾ ಮತ್ತು ಇತರ ಆಹಾರ ಪದಾರ್ಥಗಳನ್ನು ಕೂಡ ಲಭ್ಯವಾಗುವಂತೆ ಮಾಡುವ ಯೋಜನೆ ಹೊಂದಿದ್ದಾರೆ.



