ಹೊನ್ನಾವರ: ಪುರಾಣ ಪ್ರಸಿದ್ಧ ಶ್ರೀ ಗುಣವಂತೆ ಶ್ರೀ ಶಂಭುಲಿಂಗೇಶ್ವರ ದೇವರ ಪುನರ್ ಪ್ರತಿಷ್ಠೆ ಅಷ್ಟಬಂಧ ಬ್ರಹ್ಮ ಕಲಶೋತ್ಸವದ ಮೂರನೆಯ ದಿನ ರವಿವಾರ ಮಧ್ಯಾಹ್ನದ ಸಾಂಸ್ಕೃತಿಕ ಕಾರ್ಯಕ್ರಮದ ಭಾಗವಾಗಿ ಭಟ್ಕಳದ ಉಮೇಶ ಮುಂಡಳ್ಳಿ ಅವರ ನಿನಾದ ಕಲ್ಚರಲ್ ಅಕಾಡೆಮಿ ವತಿಯಿಂದ ಭಕ್ತಿ ಸಂಗೀತ (Devotional songs) ಕಾರ್ಯಕ್ರಮ ನಡೆಯಿತು.
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
ಮಧ್ಯಾಹ್ನ ಎರಡು ಗಂಟೆಯಿಂದ ಮೂರುವರೆ ಗಂಟೆವರೆಗೂ ನಡೆದ ಭಕ್ತಿ ಸಂಗೀತ (Devotional songs) ಕಾರ್ಯಕ್ರಮದಲ್ಲಿ ಉಮೇಶ ಮುಂಡಳ್ಳಿ ಹಾಗೂ ಬಳಗದವರು ಗಣೇಶ ಸ್ತುತಿ ವಿಜಯ ವಿನಾಯಕನೇ, ಸೋಜುಗದ ಸೂಜುಮಲ್ಲಿಗೆ, ತರವಲ್ಲ ತಂಗಿ ನಿನ್ನ ತಂಬೂರಿ, ರಾಮ ನಾಮ ಎಂಬ ಮೊದಲಾದ ಗೀತೆಗಳು ಅದ್ಭುತವಾಗಿ ಒಂದಕ್ಕಿಂತ ಒಂದು ಹೆಚ್ಚು ಎನ್ನುವಂತೆ ಪ್ರಸ್ತುತಪಡಿಸಿದರು. ಮುಂಡಳ್ಳಿಯವರು ಭೈರವಿಯಲ್ಲಿ ಹಾಡಿದ ತಂಬೂರಿ ಮೀಟಿದವ ಹಾಡು ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು.
Chinnara Mela/ ಭಟ್ಕಳದಲ್ಲಿ ಚಿಣ್ಣರ ಮೇಳ ಉದ್ಘಾಟನೆ
ಉಮೇಶ ಮುಂಡಳ್ಳಿಯವರೊಂದಿಗೆ ನಿನಾದ ಉಮೇಶ ಹಾಗೂ ಉತ್ಥಾನ ಉಮೇಶ ಮುಂಡಳ್ಳಿ ಸಹ ಗಾಯನದಲ್ಲಿ ಸಹಕರಿಸಿದರು. ತಬಲಾದಲ್ಲಿ ಸುಬ್ರಮಣ್ಯ ಆಚಾರ್ಯ ಗುಣವಂತೆ, ಹಾಗೂ ಹಾರ್ಮೋನಿಯಂನಲ್ಲಿ ಕಮಲಾಕರ ಆಚಾರ್ಯ ಅಗ್ರಹಾರ ಸಹಕರಿಸಿದ್ದರು.
Power Shutdown/ ಏ ೧೫ರಂದು ಭಟ್ಕಳದಲ್ಲಿ ವಿದ್ಯುತ್ ವ್ಯತ್ಯಯ
ಶ್ರೀ ಶಂಭುಲಿಂಗೇಶ್ವರ ದೇವಸ್ಥಾನ ವತಿಯಿಂದ ಅಧ್ಯಕ್ಷ ನರಸಿಂಹ ಪಂಡಿತ ಅವರು ಉಮೇಶ ಮುಂಡಳ್ಳಿ ಅವರನ್ನು ಗೌರವಿಸಿದರು. ಈ ಸಂಧರ್ಭದಲ್ಲಿ ದೇವಸ್ಥಾನದ ಉಪಾಧ್ಯಕ್ಷ ಎಂ ಎಸ್ ಹೆಗಡೆ ಹಾಗೂ ಕಾರ್ಯದರ್ಶಿ ಎಂ ವಿ ಹೆಗಡೆ ಮೊದಲಾದ ಗಣ್ಯರು ಉಪಸ್ಥಿತರಿದ್ದರು.
taxi drivers/ ಭಟ್ಕಳ ಟ್ಯಾಕ್ಸಿ ಚಾಲಕರ ಸಮಸ್ಯೆ ಪರಿಹಾರಕ್ಕಾಗಿ ಡಿ ವೈ ಎಸ್ ಪಿ ಕಚೇರಿಯಲ್ಲಿ ಸಭೆ



