ಭಟ್ಕಳ: ತಾಲೂಕಿನ ಆಳ್ವೆಕೋಡಿಯ ಶ್ರೀ ದುರ್ಗಾ ಮೊಗೇರ ಚಾರಿಟೇಬಲ್ ಟ್ರಸ್ಟ್‌ನ ಹೊಸ ಕಟ್ಟಡದ ಅಡಿಗಲ್ಲು (foundation) ಸಮಾರಂಭ ಭಕ್ತಿಭಾವ, ಸಂಭ್ರಮ ವಾತಾವರಣದಲ್ಲಿ ಯಶಸ್ವಿಯಾಗಿ ನೆರವೇರಿತು. ಸಮಾಜ ಸೇವೆಯ ಮಹತ್ವಾಕಾಂಕ್ಷಿ ಕನಸಿಗೆ ಭದ್ರ ಅಡಿಪಾಯ (foundation) ಹಾಕಿದ ಈ ಶುಭ ಕ್ಷಣಕ್ಕೆ ಊರಿನ ಅನೇಕ ಗಣ್ಯರು, ಮುಖಂಡರು ಹಾಗೂ ನಾಗರಿಕರು ಸಾಕ್ಷಿಯಾದರು.
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
ಈ ಶುಭ ಸಮಾರಂಭದಲ್ಲಿ (foundation) ಶ್ರೀ ಜೈ ದುರ್ಗಾ ಮೊಗೇರ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ದುರ್ಗಪ್ಪ ಸಂಕಯ್ಯ ಮೊಗೇರ, ಉಪಾಧ್ಯಕ್ಷ ಗೋಪಾಲ ನಾಗಪ್ಪ ಮೊಗೇರ, ಕಾರ್ಯದರ್ಶಿ ದುರ್ಗಾದಾಸ ನಾಗಪ್ಪ ಮೊಗೇರ ಹಾಗೂ ಸರ್ವ ಸದಸ್ಯರು ಉಪಸ್ಥಿತರಿದ್ದರು. ಅದೇ ರೀತಿ ಶ್ರೀ ದುರ್ಗಾ ಮೊಗೇರ ಸೌಹಾರ್ದ ಸಹಕಾರಿ ಸಂಘದ ಅಧ್ಯಕ್ಷ ಯಾದವ್ ವಿ ಮೊಗೇರ, ಉಪಾಧ್ಯಕ್ಷ ಬಾಬು ಗೋವಿಂದ ಮೊಗೇರ ಹಾಗೂ ನಿರ್ದೇಶಕರು ಭಾಗವಹಿಸಿ ಕಾರ್ಯಕ್ರಮಕ್ಕೆ ಮೆರುಗು ತಂದರು.
Bhatkal/ ಬಾರ್‌ನಲ್ಲಿ ಬಿಯರ್ ವಿಚಾರಕ್ಕೆ ಗಲಾಟೆ
ಶಿರಾಲಿ ಗ್ರಾಮ ಪಂಚಾಯತ್ ನಿಕಟ ಪೂರ್ವ ಅಧ್ಯಕ್ಷ ಭಾಸ್ಕರ ದೈಮನೆ, ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಧರ್ಮದರ್ಶಿಗಳಾದ ತಿಮ್ಮಪ್ಪ ಹೊನ್ನಿಮನೆ, ಹನುಮಂತ ಮಂಜಪ್ಪ ನಾಯ್ಕ, ನಾರಾಯಣ ದೈಮನೆ, ಅರವಿಂದ ಪೈ ಮಾತನಾಡಿದರು.
High Court verdict/ ಗಡಿಪಾರು ಆದೇಶ ರದ್ದು: ಮುರುಡೇಶ್ವರದ ಆರೋಪಿಗಳು ನಿರಾಳ
ಮಾರಿಜಾತ್ರಾ ಮಹೋತ್ಸವದ ಅಧ್ಯಕ್ಷ ರಾಮ ಮೊಗೇರ, ಮೊಗೇರ ಸಮಾಜದ ಅಧ್ಯಕ್ಷ ಅಣ್ಣಪ್ಪ ಮೊಗೇರ, ಅಳ್ವೇಕೋಡಿ ತೆಂಗಿನಗುಂಡಿ ಪರ್ಶಿಯನ್ ಬೋಟ್ ಯೂನಿಯನ್ ಅಧ್ಯಕ್ಷ ವೆಂಕಟ್ರಮಣ ಮೊಗೇರ, ಕಾರ್ಯದರ್ಶಿ ಈಶ್ವರ ಮೊಗೇರ ಗೊರಟೆ ಹಾಗೂ ಊರಿನ ಸಮಸ್ತ ನಾಗರಿಕರು ಉಪಸ್ಥಿತರಿದ್ದು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು. ಈ ಹೊಸ ಕಟ್ಟಡವು ಸಮಾಜ ಸೇವೆ, ಒಗ್ಗಟ್ಟು ಹಾಗೂ ಜನೋಪಯೋಗಿ ಕಾರ್ಯಗಳಿಗೆ ಕೇಂದ್ರವಾಗಲಿ ಎಂದು ಎಲ್ಲರೂ ಹಾರೈಸಿದರು.
cricket tournament/ ಕೊಂಕಣಿ ಪ್ರೀಮಿಯರ್ ಲೀಗ್ ಕ್ರಿಕೆಟ್ ಪಂದ್ಯಾವಳಿಯ ಸಮಾರೋಪ



