ಭಟ್ಕಳ: ಬಿಯರ್ ನೀಡುವ ವಿಚಾರಕ್ಕೆ ಸಂಬಂಧಿಸಿ ಗ್ರಾಹಕರು ಸಿಬ್ಬಂದಿ ಮೇಲೆ ಹಲ್ಲೆ ನಡೆಸಿ ಜೀವ ಬೆದರಿಕೆ ಹಾಕಿದ ಘಟನೆ ಭಟ್ಕಳ (Bhatkal) ತಾಲೂಕಿನ ಗೊರಟೆ ಕ್ರಾಸ್‌ನಲ್ಲಿರುವ ಆರಾಧನಾ ಬಾರ್‌ನಲ್ಲಿ ನಡೆದಿದೆ.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ಪ್ರಕರಣಕ್ಕೆ ಸಂಬಂಧಿಸಿ ಮಹೇಂದ್ರ ಶನಿಯಾರ ನಾಯ್ಕ, ಮಂಜುನಾಥ ಶನಿಯಾರ ನಾಯ್ಕ, ಚಂದನ್ ಮಾರುತಿ ನಾಯ್ಕ, ರಾಜೇಶ್ ನಾಗಪ್ಪ ನಾಯ್ಕ ಹಾಗೂ ಮತ್ತೊಬ್ಬರನ್ನು ಆರೋಪಿಗಳೆಂದು ಗುರುತಿಸಲಾಗಿದೆ. ಇವರು ಮುಂಡಳ್ಳಿ ಸಮೀಪದ ನೀರಗದ್ದೆ ನಿವಾಸಿಗಳಾಗಿದ್ದಾರೆ.

High Court verdict/ ಗಡಿಪಾರು ಆದೇಶ ರದ್ದು: ಮುರುಡೇಶ್ವರದ ಆರೋಪಿಗಳು ನಿರಾಳ

ಭಟ್ಕಳ (Bhatkal) ಗ್ರಾಮೀಣ ಪೊಲೀಸ್ ಠಾಣೆಗೆ ಯಶೋಧರ ನಾಯ್ಕ ಎಂಬವರು ನೀಡಿದ ದೂರಿನ ಪ್ರಕಾರ, ಆರೋಪಿಗಳು ಬಾರ್‌ಗೆ ಬಂದು ಮದ್ಯ ಸೇವಿಸುತ್ತಿದ್ದರು. ಈ ವೇಳೆ ಮಹೇಂದ್ರ ಶನಿಯಾರ ನಾಯ್ಕ ಎಂಬುವರು ಬಿಯರ್ ಬಾಟಲಿ ತೆಗೆದುಕೊಂಡು ಹೋಗಲು ಯತ್ನಿಸಿದಾಗ, ಇದು ಲೈಸೆನ್ಸ್ ಹೊಂದಿರುವ ಬಾರ್ ಆಗಿರುವುದರಿಂದ ನಿಯಮ ಪಾಲಿಸುವಂತೆ ಸಿಬ್ಬಂದಿ ಸೂಚಿಸಿದ್ದಾರೆ ಎನ್ನಲಾಗಿದೆ. ಇದರಿಂದ ಆಕ್ರೋಶಗೊಂಡ ಮಹೇಂದ್ರ ನಾಯ್ಕ ಮತ್ತಷ್ಟು ಬಿಯರ್ ನೀಡುವಂತೆ ಒತ್ತಾಯಿಸಿದ್ದಾರೆ. ರಾತ್ರಿ 12 ಗಂಟೆಯ ಬಳಿಕ ಮಾತ್ರ ನೀಡುವುದಾಗಿ ಸಿಬ್ಬಂದಿ ತಿಳಿಸಿದಾಗ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

cricket tournament/ ಕೊಂಕಣಿ ಪ್ರೀಮಿಯರ್ ಲೀಗ್ ಕ್ರಿಕೆಟ್ ಪಂದ್ಯಾವಳಿಯ ಸಮಾರೋಪ

ಬಳಿಕ ಮಹೇಂದ್ರ ನಾಯ್ಕ ಹಾಗೂ ಇತರರು ಬಿಯರ್ ಬಾಟಲಿ ಒಡೆದು ಕೌಂಟರ್ ಬಳಿ ಬಂದು ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ್ದಾರೆ. ಚಂದನ್ ಮಾರುತಿ ನಾಯ್ಕ ಬಿಯರ್ ಬಾಟಲಿಯಿಂದ ಹಲ್ಲೆ ನಡೆಸಿ ಗಾಯಪಡಿಸಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಇತರ ಆರೋಪಿಗಳು ಕೈಯಿಂದ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ. ಗಲಾಟೆಯನ್ನು ತಡೆಯಲು ಬಂದ ಯಶೋಧರ ನಾಯ್ಕ ಮೇಲೂ ಆರೋಪಿಗಳು ಹಲ್ಲೆ ನಡೆಸಿ, ಅವಾಚ್ಯ ಶಬ್ದಗಳಿಂದ ನಿಂದಿಸಿ ಜೀವ ಬೆದರಿಕೆ ಹಾಕಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

Deputy Divisional Officer/ ಭಟ್ಕಳ ಉಪ ವಿಭಾಗಾಧಿಕಾರಿ ಹುದ್ದೆ ಭರ್ತಿ: ಜೆ ಮಹೇಶ ಅಧಿಕಾರ ಸ್ವೀಕಾರ