ಭಟ್ಕಳ: ತಾಲೂಕಿನ ಸ್ಥಳೀಯ ಹಿಂದೂಗಳ ದೈವಿಕ ಶಕ್ತಿ ಕೇಂದ್ರವಾದ ಮುರಿನಕಟ್ಟೆಯನ್ನು (Murinakatte) ಧ್ವಂಸಗೊಳಿಸಿರುವುದನ್ನು ಖಂಡಿಸಿ ಮತ್ತು ಈ ಕೂಡಲೇ ಮುರಿನಕಟ್ಟೆಯ (Murinakatte) ಮರು ನಿರ್ಮಾಣ ಮಾಡುವಂತೆ ಆಗ್ರಹಿಸಿ ಭಟ್ಕಳ (Bhatkal) ತಾಲೂಕು ಹಿಂದೂ ಸಂಘಟನೆಗಳ ಒಕ್ಕೂಟದ ವತಿಯಿಂದ ಶುಕ್ರವಾರದಂದು ಸಹಸ್ರಾರು ಸಂಖ್ಯೆಯಲ್ಲಿ ಸೇರಿದ ಜನಸ್ತೋಮದ ನಡುವೆ ಸಹಾಯಕ ಆಯುಕ್ತರ ಮೂಲಕ ಜಿಲ್ಲಾಧಿಕಾರಿಗೆ ಹಾಗೂ ಮುಖ್ಯಮಂತ್ರಿಗೆ ಮನವಿ ಸಲ್ಲಿಸಲಾಯಿತು.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ಉತ್ತರ ಕನ್ನಡ (Uttara Kannada) ಸಂಪ್ರದಾಯದಂತೆ ಜಿಲ್ಲೆಯ ಹಿಂದೂಗಳು ತಾಲೂಕಿನ ನಗರ ಭಾಗದಲ್ಲಿರುವ ಅನಾದಿಕಾಲದಿಂದಲೂ ಮುರಿನಕಟ್ಟೆಯು ಸ್ಥಳೀಯ ಪೂಜಿಸಿಕೊಂಡು ಬಂದ ಹಾಗೂ ಶಿರಸಿಯ (Sirsi) ಶ್ರೀ ಮಾರಿಕಾಂಬಾ ದೇವಿಯ ದೇವಸ್ಥಾನಕ್ಕೆ ಸಾಗುವ ಹೊರೆಯನ್ನು ಇಡುವ ಧಾರ್ಮಿಕ ಶ್ರದ್ಧಾ ಮತ್ತು ದೈವಿಕ ಶಕ್ತಿಯ ಸ್ಥಳವಾಗಿದ್ದು, ಸ್ಥಳೀಯ ಸರ್ಕಾರಿ ಆಡಳಿತದ ದಾಖಲೆಗಳಲ್ಲೂ ಸಹ ಉಲ್ಲೇಖವಿರುತ್ತದೆ. ಈ ಮೊದಲು ಈ ಕಟ್ಟೆಯು ಹಳೆಯ ರಾಷ್ಟ್ರೀಯ ಹೆದ್ದಾರಿ (National Highway) ಪಕ್ಕದಲ್ಲಿದ್ದು, ಸುಮಾರು ೧೦ ವರ್ಷಗಳ ಹಿಂದೆ ರಾಷ್ಟ್ರೀಯ ಹೆದ್ದಾರಿ ಆಗಲೀಕರಣದ ಸಮಯದಲ್ಲಿ ಪಕ್ಕದ ಸ್ಥಳಕ್ಕೆ ಸ್ಥಳಾಂತರಿಸುವ ಉದ್ದೇಶದಿಂದ ರಸ್ತೆ ಬದಿಗೆ ಸರಿಸಲಾಗಿತ್ತು. ಕಳೆದ ಸುಮಾರು ೧೦ ವರ್ಷಗಳಿಂದ ಮುಂದುವರಿದ ರಸ್ತೆ ಕಾಮಗಾರಿಯ ಜೊತೆಜೊತೆಗೆ ನಿರಂತರ ಸ್ಥಳೀಯ ಹಿಂದೂಗಳ ಹೋರಾಟ ಮತ್ತು ಬೇಡಿಕೆಯಂತೆ ಇತ್ತೀಚೆಗೆ ಪಕ್ಕದ ಸರ್ಕಾರಿ ಜಾಗದಲ್ಲಿ ನಿರ್ಮಿಸಲು ಸ್ಥಳೀಯ ಆಡಳಿತದಿಂದ ಜಾಗ ಗುರುತಿಸಲಾಗಿತ್ತು ಎಂದು ಮನವಿಯಲ್ಲಿ ತಿಳಿಸಲಾಗಿದೆ.

Murinakatte/ ಮುರಿನಕಟ್ಟೆ ಹೋರಾಟಕ್ಕೆ ದೈವಬಲ; ಪೂಜೆ ಬಳಿಕ ನಿಂತ ಮಳೆ!

ಮೇ ೨೪ರಂದು ಬೆಳಿಗ್ಗೆ ತಾಲೂಕಾಡಳಿತ ಮತ್ತು ಜಿಲ್ಲಾಡಳಿತ ಮತ್ತು ಅಧಿಕಾರಿಗಳು ಗುರುತಿಸಿದ ಸ್ಥಳದಲ್ಲಿ ಈ ಮೇಲಿನ ಎಲ್ಲಾ ಅಧಿಕಾರಿಗಳ ಸುಪರ್ದಿಯಲ್ಲಿ ಬೆಳಿಗ್ಗೆ ೧೦’*೧೦’ ಅಳತೆಯ ಮುರಿನಕಟ್ಟೆಯ ನಿರ್ಮಾಣ ಮಾಡಲಾಗಿತ್ತು. ಮರು ನಿರ್ಮಾಣವಾದ ಮುರಿನಕಟ್ಟೆಯು ತಾಲೂಕಾಡಳಿತ ಗುರುತಿಸಿದ ರಾಷ್ಟ್ರೀಯ ಹೆದ್ದಾರಿ ಪಕ್ಕದ ಸರ್ಕಾರಿ ಜಾಗದಲ್ಲಿದ್ದು, ವಾಹನ ಸಂಚಾರಕ್ಕೂ ಹಾಗೂ ಅನ್ಯ ಕೋಮಿನವರಿಗೂ ಯಾವುದೇ ತೊಂದರೆಯಾಗದಂತೆ ಸೂಕ್ತ ಸ್ಥಳದಲ್ಲಿ ನಿರ್ಮಾಣವಾಗಿದ್ದರೂ ಸಹ ಕಟ್ಟೆಯಿಂದ ದೂರದಲ್ಲಿರುವ ಖಾಸಗಿ ಜಾಗ ಹೊಂದಿದ ಮುಸ್ಲಿಂ ವ್ಯಕ್ತಿಯು ಆತನ ಜಾಗದ ಮುಂಭಾಗದಲ್ಲಿರುವ ಸರ್ಕಾರಿ ಜಾಗವನ್ನು ಅತಿಕ್ರಮಿಸುವ ದುರುದ್ದೇಶದಿಂದ ಮರು ನಿರ್ಮಾಣಗೊಂಡ ಮುರಿನಕಟ್ಟೆಯನ್ನು ತೆರವುಗೊಳಿಸಲು, ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಹರಿಬಿಟ್ಟು ಜನರನ್ನು ಪ್ರಚೋದಿಸಿದ್ದಾನೆ. ಮುಸ್ಲಿಂ ಮುಖಂಡರ ಬೆಂಬಲದೊಂದಿಗೆ ಸಾವಿರಾರು ಸಂಖ್ಯೆಯಲ್ಲಿ ಜನರನ್ನು ಅದೇ ದಿನ ಸಂಜೆ ಸೇರಿಸಿ ಹೆದ್ದಾರಿ ಬಂದ್ ಮಾಡಿ, ಕರ್ತವ್ಯನಿರತ ಪೊಲೀಸರ ಮೇಲೆ ಹಲ್ಲೆ ಮಾಡಿ, ಮರು ನಿರ್ಮಾಣಗೊಂಡ ಹಿಂದೂ ಶ್ರದ್ಧಾ ಕೇಂದ್ರವಾದ ಮುರಿನಕಟ್ಟೆಯನ್ನು ಪೊಲೀಸ್ ವರಿಷ್ಠಾಧಿಕಾರಿಗಳ ಸಮ್ಮುಖದಲ್ಲೇ ಕಾನೂನು ಉಲ್ಲಂಘಿಸಿ ಧ್ವಂಸಗೊಳಿಸಿರುತ್ತಾರೆ ಎಂದು ಮನವಿಯಲ್ಲಿ ಆರೋಪಿಸಲಾಗಿದೆ.

farewell/ ಮೂರು ದಶಕಗಳ ಸೇವೆ ಬಳಿಕ ಹೂವಾ ಗೌಡಗೆ ಭಾವಪೂರ್ಣ ಬೀಳ್ಕೊಡುಗೆ

ಭಟ್ಕಳದಲ್ಲಿ ಅದೇ ದಿನ ಬೆಳಿಗ್ಗೆ ಸುಮಾರು ೧೧ ಗಂಟೆಗೆ ನದಿಯ ನೀರಿನಲ್ಲಿ ೧೧ ಜನರ ದುರ್ಮರಣವಾಗಿ ಶೋಕಸಾಗರದಲ್ಲಿದ್ದಾಗ ಅದೇ ಸಮಯವನ್ನು ದುರುಪಯೋಗಪಡಿಸಿಕೊಂಡು ದುಷ್ಕೃತ್ಯ ನಡೆಸಿರುವುದು ಭಟ್ಕಳದಲ್ಲಿ ಮುಸ್ಲಿಂ ಮತಾಂಧರ ಯೋಜನಾಬದ್ದ ಅಮಾನವೀಯ ಕೃತ್ಯಕ್ಕೆ ಸಾಕ್ಷಿಯಾಗಿದೆ ಹಾಗೂ ಅವರ ಮಿತಿ ಮೀರಿದ ಅಟ್ಟಹಾಸವನ್ನು ಎತ್ತಿ ತೋರಿಸುತ್ತದೆ ಎಂಬ ಗಂಭೀರ ಆರೋಪ ಮಾಡಲಾಗಿದೆ.

newlywed couple/ ಬೈಕಿನಲ್ಲಿದ್ದ ನವ ದಂಪತಿ ಮೇಲೆ ಬಸ್ ಹತ್ತಿಸಲು ಹೋದ ಚಾಲಕ

ಮುರಿನಕಟ್ಟೆ ಸ್ಥಳವು ಮುಸ್ಲಿಮರಿಗೆ ಯಾವುದೇ ರೀತಿಯಲ್ಲೂ ಸಂಬಂಧಪಡದ ವಿಷಯವಾಗಿದ್ದು, ಇದು ಕೇವಲ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಮತ್ತು ಹಿಂದೂ ಸಮಾಜದ ನಡುವಿನ ಒಪ್ಪಂದದ ಅನ್ವಯ ನಿರ್ಮಾಣಗೊಂಡ ಹಿಂದೂಗಳ ಧಾರ್ಮಿಕ ಭಾಗವಾಗಿತ್ತು. ಇದು ಮುಸ್ಲಿಮರಿಗೆ ಸೇರಿದ್ದ ಜಾಗವೂ ಅಲ್ಲ. ಅವರಿಗೆ ಯಾವುದೇ ಕಾರಣಕ್ಕೂ ಸಂಬಂಧಿಸಿದ ವಿಷಯವೂ ಆಗಿರಲಿಲ್ಲ. ಹೀಗಿದ್ದೂ, ಕೇವಲ ಜಿಲ್ಲೆಯ ಕೋಮು ಸೌಹಾರ್ದತೆ ಕೆಡಿಸಿ, ಗಲಭೆ ಸೃಷ್ಟಿಸುವ ಏಕೈಕ ದುರುದ್ದೇಶದಿಂದಲೇ ಮುಸ್ಲಿಂ ಮತಾಂಧರು ಈ ಕೃತ್ಯ ಎಸಗಿರುತ್ತಾರೆ ಎಂದು ಆರೋಪಿಸಲಾಗಿದೆ.

Tribute/ ಡಾ ಆರ್ ವಿ ಸರಾಫರಿಗೆ ನುಡಿನಮನ-ಶಾಲೆಗೆ ೨.೫೦ ಲಕ್ಷ ರೂ ದೇಣಿಗೆ

ಹಿಂದುಗಳ ದೈವಿಕ ಶಕ್ತಿ ಕೇಂದ್ರವಾದ ಮುರಿನಕಟ್ಟೆಯ ಮರು ನಿರ್ಮಾಣ ಈ ಕೂಡಲೇ ಮಾಡಬೇಕು. ನಾಲ್ಕು ಸಾವಿರಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ಮುಸ್ಲಿಮರು ಗಲಭೆಯಲ್ಲಿ ಪಾಲ್ಗೊಂಡಿದ್ದರೂ, ಕೇವಲ ಕೆಲವೇ ಕೆಲವು ವ್ಯಕ್ತಿಗಳ ಮೇಲೆ ಕೇಸ್ ದಾಖಲಿಸಿ ಬಂಧಿಸಿದ್ದು, ಇನ್ನುಳಿದ ಎಲ್ಲಾ ಮುಸ್ಲಿಂ ಮತಾಂಧರ ಮೇಲೂ ಈ ಕೂಡಲೇ ಪ್ರಕರಣ ದಾಖಲಿಸಿ ಬಂಧನ ಮಾಡಬೇಕು. ಮುರಿನಕಟ್ಟೆ ಧ್ವಂಸ ಮಾಡಲು ಪ್ರಚೋದಿಸಿ ಭಟ್ಕಳದ ಅಶಾಂತಿಗೆ ಕಾರಣೀಕರ್ತರಾದ ಮುಸ್ಲಿಂ ಮುಖಂಡರ ಮೇಲೆ ಗಂಭೀರ ಪ್ರಕರಣ ದಾಖಲಿಸಿ ತಕ್ಷಣವೇ ಬಂಧನ ಮಾಡಬೇಕು. ನ್ಯಾಯ ಕೇಳಿ ಪೊಲೀಸ್ ಠಾಣೆ ಎದುರು ಶಾಂತಿಯುತ ಪ್ರತಿಭಟನೆ ನಡೆಸಿದ ಹಿಂದೂ ಮುಖಂಡರು ಮತ್ತು ಕಾರ್ಯಕರ್ತರ ಮೇಲಿನ ಪ್ರಕರಣ ಕೈ ಬಿಡಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದ್ದಾರೆ.

beer bottle/ ನಾಯಿ ವಿಚಾರಕ್ಕೆ ಬಿಯರ್ ಬಾಟಲಿಯಿಂದ ಹಲ್ಲೆ 

ಹಿಂದೂ ಜಾಗರಣ ವೇದಿಕೆಯ ದಕ್ಷಿಣ ಕನ್ನಡದ ಪ್ರಾಂತ ಮುಖ್ಯ ಸಂಚಾಲಕ ಶ್ರೀಕಾಂತ ಶೆಟ್ಟಿ ಕಾರ್ಕಳ ಮಾತನಾಡಿ, ಮುರಿನಕಟ್ಟೆ ಒಡೆದಿದ್ದೀರಿ, ಕಟ್ಟಲೇಬೇಕು. ಅರಣ್ಯ ಭೂಮಿಯಲ್ಲಿನ ನಮ್ಮ ಕಟ್ಟೆಯನ್ನು ಹೇಗೆ ಒಡೆದಿದ್ದೀರಿ. ಒಡೆದವರ ಮೇಲೆ ಯಾವ ಕೇಸ್ ಹಾಕಿದ್ದೀರಿ. ಪೊಲೀಸರ ಹಾಗೂ ಕಾನೂನಿನ ಮೇಲೆ ಹಲ್ಲೆ ಆಗಿದೆ. ೩ ಸಾವಿರ ಜನರ ಪೈಕಿ ಕೆಲವೇ ಕೆಲವರ ಮೇಲೆ ಪ್ರಕರಣ ದಾಖಲಿಸಿದ್ದೀರಿ. ಶಿರಸಿ ಮಾರಿಕಾಂಬಾ ದೇವಿಯ ಆರಾಧನೆ ಮಾಡುವ ಜಾಗವನ್ನು ಒಡೆದಿದ್ದೀರಿ. ೧೯೯೩ರ ನ್ಯಾ ಜಗನ್ನಾಥ ಆಯೋಗದ ವರದಿಗಳ ಪ್ರಕಾರ ಭಟ್ಕಳದ ಒಳಗಡೆಗೆ ಪಾಕಿಸ್ತಾನದ ಐಎಸ್ಐಎಸ್ ಉಗ್ರ ಸಂಘಟನೆ ಕೆಲವರು ಭಟ್ಕಳದಲ್ಲಿದ್ದಾರೆ ಎಂದು ಆರೋಪಿಸಿದರು.

Mankal Vaidya/ ಮಂಕಾಳ ವೈದ್ಯಗೆ ತಪ್ಪಿದ ಸಚಿವ ಸ್ಥಾನ: ಅಭಿಮಾನಿಗಳಲ್ಲಿ ಅಸಮಾಧಾನ

ರಾಷ್ಟ್ರೀಯ ಗುಪ್ತಚರ ಇಲಾಖೆಯ ಕಚೇರಿ ಸ್ಥಾಪನೆ ಮಾಡಬೇಕು. ಇಲ್ಲಿನ ೩ ಸಾವಿರ ಮುಸ್ಲಿಮರಿಂದ ದಾಳಿ ಹೇಗೆ ನಡೆಯಲು ಸಾಧ್ಯ ಇಲಾಖೆ ಉತ್ತರಿಸಬೇಕು. ತಂಜೀಂ ಸಂವಿಧಾನಕ್ಕೆ ವಿರುದ್ದವಾಗಿ ಭಟ್ಕಳದಲ್ಲಿ ಕೆಲಸ ಮಾಡುತ್ತಿದೆ. ಇದಕ್ಕೆ ಪೋಲಿಸ್ ಇಲಾಖೆ ಕ್ರಮ ತೆಗೆದುಕೊಳ್ಳಬೇಕು. ಜಿಲ್ಲೆ ಹಾಗೂ ರಾಜ್ಯ ಮಟ್ಟದಲ್ಲಿ ಪ್ರತಿಭಟನೆ ನಡೆಸಲಿದ್ದೇವೆ. ಇಲ್ಲಿನ ಮತಾಂಧ ಶಕ್ತಿಯ ಮೇಲೆ ಕಣ್ಗಾವಲು ಪೋಲಿಸ್ ಇಲಾಖೆಯ ಹಾಕಬೇಕು ಎಂದು ಶ್ರೀಕಾಂತ ಶೆಟ್ಟಿ ಒತ್ತಾಯಿಸಿದರು.

Murinakatte/ ಮುರಿನಕಟ್ಟೆ ಸ್ಥಳದಲ್ಲಿ ರಸ್ತೆ ಕಾಮಗಾರಿ: ಬಿಗು ಬಂದೋಬಸ್ತ್ 

ವಿಶ್ವ ಹಿಂದು ಪರಿಷತ್ ಉತ್ತರ ಪ್ರಾಂತ ಸಂಚಾಲಕ ಪುಂಡಲೀಕ ದಳವಾಯಿ ಮಾತನಾಡಿ, ಮತಾಂಧ ಶಕ್ತಿಯ ವಿರುದ್ಧದ ಒಗ್ಗಟ್ಟಿನ ಮಂತ್ರ ಜಪಿಸಿದ ಭಟ್ಕಳ ಹಿಂದುಗಳು ಅಂದು ಶೋಕಾಚರಣೆ ಇಲ್ಲವಾಗಿದ್ದರೆ ಅಂದೇ ೫೦ ಜನ ಸೇರಿ ಮುರಿನಕಟ್ಟೆ ಕಟ್ಟುತ್ತಿದ್ದೇವು. ವಿಶ್ವ ಹಿಂದು ಪರಿಷತ್, ಭಜರಂಗ ದಳದ ಸಂಘಟನೆ ರಾಜ್ಯ ವ್ಯಾಪ್ತಿ ಪ್ರತಿಭಟನೆ ನಡೆಸಲು ಸಜ್ಜಾಗಿದ್ದೇವು. ಮುರಿನಕಟ್ಟೆಯಲ್ಲಿ ನಿಂತು ಭಟ್ಕಳ ಹಿಂದು ಸಮಾಜದ ಜೊತೆಗೆ ಕಟ್ಟೆಯನ್ನು ಕಟ್ಟುತ್ತೇವೆ. ಹಿರಿಯರ ಮನವಿಗೆ ಗೌರವ ಕೊಟ್ಟು ರಾಜ್ಯ ಚಲೋ ಹಿಂಪಡೆದಿದ್ದೀವಿ. ಇತಿಹಾಸದಲ್ಲಿ ಮುಸ್ಲಿಮರನ್ನು ಸೋಲಿಸಿದ್ದೇವೆ ಹೊರತು ಹಿಂದುಗಳು ಸೋತಿದ್ದಿಲ್ಲ ಎಂದರು.

Dirty water/ ತೆರೆದ ಚರಂಡಿಯಲ್ಲಿ ಗಲೀಜು ನೀರು: ಮಾರುತಿ ನಗರದಲ್ಲಿ ಅವ್ಯವಸ್ಥೆ

ಇದಕ್ಕೂ ಪೂರ್ವದಲ್ಲಿ ನಡೆದ ಬೃಹತ್ ಪ್ರತಿಭಟನಾ ಮೆರವಣಿಗೆಯು ಇಲ್ಲಿನ ಚೆನ್ನಪಟ್ಟಣ ಹನುಮಂತ ದೇವಸ್ಥಾನದಿಂದ ಹೊರಟು ಹೂವಿನ ಪೇಟೆ ಮಾರ್ಗವಾಗಿ ಮಾರಿಗುಡಿ ದೇವಸ್ಥಾನದ ಮೂಲಕ ಪೇಟೆಯ ಮುಖ್ಯ ರಸ್ತೆಯಿಂದ ರಾಷ್ಟ್ರೀಯ ಹೆದ್ದಾರಿ ತಲುಪಿ ಅಲ್ಲಿಂದ ತಾಲೂಕು ಆಡಳಿತದ ಸೌಧದ ತನಕ ಬಂದು ಸಹಾಯಕ ಆಯುಕ್ತರಿಗೆ ಮನವಿ ಸಲ್ಲಿಸಿದರು.

Murinakatte/ ಶೀಘ್ರದಲ್ಲೇ ಮುರಿನಕಟ್ಟೆ ಮರುನಿರ್ಮಾಣ: ಸಂಸದ ಕಾಗೇರಿ

ಈ ಸಂದರ್ಭದಲ್ಲಿ ವಿಶ್ವ ಹಿಂದು ಪರಿಷತ್ ತಾಲೂಕು ಅಧ್ಯಕ್ಷ ರಾಮಕೃಷ್ಣ ನಾಯ್ಕ, ಹಿಂದು ಜಾಗರಣಾ ವೇದಿಕೆ (VHP) ತಾಲೂಕು ಸಂಚಾಲಕ ಜಯಂತ ನಾಯ್ಕ, ಸಹ ಸಂಚಾಲಕ ನಾಗೇಶ ನಾಯ್ಕ, ಕುಮಾರ ನಾಯ್ಕ, ಪ್ರಮುಖ ಸುಬ್ರಹ್ಮಣ್ಯ ಕುಮಟಾ(Kumta), ವಿಶ್ವ ಹಿಂದು ಪರಿಷತ್, ಭಜರಂಗದಳ ಸಂಚಾಲಕರು, ಕಾರ್ಯಕರ್ತರು, ತಾಲೂಕಿನ ವಿವಿಧ ಸಮಾಜದ ಅಧ್ಯಕ್ಷರು, ಮುಖಂಡರು, ೪ ಸಾವಿರಕ್ಕೂ ಅಧಿಕ ಹಿಂದು ಬಾಂಧವರು ಪಾಲ್ಗೊಂಡಿದ್ದರು.

Fine/ ಅಪ್ರಾಪ್ತಗೆ ಬೈಕ್ ಕೊಟ್ಟ ಮಹಿಳೆಗೆ ದಂಡ